ಸರ್ಕಾರದಿಂದ ಬರುವ ಎಲ್ಲಾ ಅನುದಾನ ಪಡೆದುಕೊಳ್ಳಿ..... ಶ್ರೀ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್ ವಾರ್ಷಿಕ ಸಭೆಯಲ್ಲಿ ವಿಶ್ವೇಶ್ವರಯ್ಯ ಕಿವಿ ಮಾತು,
ದಿನಾಂಕ 2-9-2018 ರ ಭಾನುವಾರ ದೇವಾಂಗ ಶ್ರೀ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್ ವತಿಯಿಂದ ವಾರ್ಷಿಕ ಸಭೆಯನ್ನು ಅಧ್ಯಕ್ಷರಾದ ಎಸ್ ಎಲ್ ರಾಜಣ್ಣ ಅಧ್ಯಕ್ಷತೆಯಲ್ಲಿ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆಸಲಾಯಿತು. ಕುಮಾರಿ ನವ್ಯಶ್ರೀ ಪ್ರಾರ್ಥನೆಯೊಂದಿಗೆ, ಶ್ರೀಮತಿ ಗೌರಮ್ಮ ಮತ್ತು ಶ್ರೀಮತಿ ಲತಾ ನಾಗರಾಜ್ ದೇವರ ದಾಸಿಮಯ್ಯ ಮತ್ತು ದೇವಲ ಮಹರ್ಷಿಗಳ ಪೂಜೆ ಸಲ್ಲಿಸಿದರು, ಗೌರವಾಧ್ಯಕ್ಷ ಎನ್ ಚಂದ್ರಶೇಖರ್ ದೀಪ ಬೆಳಗುವುದರ ಮೂಲಕ ಸಭೆಯನ್ನು ಆರಂಭಿದರು, ಮುಖ್ಯ ಅತಿಥಿಗಳಾಗಿ ಟ್ರಸ್ಟಿನ ಗೌರವಾಧ್ಯಕ್ಷ ಎನ್.ಚಂದ್ರಶೇಖರ್, ಹಿರಿಯ ಸಲಹೆಗಾರ ಸಿವಿಎಸ್ ವಿಶ್ವೇಶ್ವರಯ್ಯ ಮತ್ತು ದೇವಾಂಗ ಮಂಡಲಿಯ ನಿರ್ದೇಶಕರಾದ ಎಸ್ಎನ್ ನಟರಾಜ್, ಎಸ್ಎನ್ ಶಿವರಾಮ್ ಭಾಗವಹಿಸಿದ್ದರು.
ಕಾರ್ಯದರ್ಶಿ ನಾಗರಾಜ್ ಹಿಂದಿನ ವರ್ಷದ ಲೆಕ್ಕಾಚಾರದ ವಿವರವನ್ನು ಸಭೆಯಲ್ಲಿ ಮಂಡಿಸಿದ ನಂತರ ಸಭೆಯಲ್ಲಿ ದೇವಾಂಗ ಸಮಾಜ ಮತ್ತು ನೇಕಾರರ ಚಿಂತನೆಗಳ ಕುರಿತು ಗಂಭೀರವಾಗಿ ಚರ್ಚಿಸಲಾಯಿತು ಹಾಗೂ ದೇವಾಂಗ ಸಮಾಜವನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲ ಸಮಾಜ ಬಾಂಧವರನ್ನು ಒಗ್ಗೂಡಿಸುವುದರೊಂದಿಗೆ ಮುಖ್ಯ ಆದ್ಯತೆಯನ್ನು ವಿದ್ಯಾಭ್ಯಾಸಕ್ಕೆ ನೀಡಲು ತೀರ್ಮಾನಿಸಲಾಯಿತು. ನೇಕಾರ ಕುಟುಂಬಗಳಿಗೆ ಸರ್ಕಾರದಿಂದ ಬರುವ ಅನುದಾನಗಳ ಕುರಿತು ಹಿರಿಯ ಸಲಹೆಗಾರ ವಿಶ್ವೇಶ್ವರಯ್ಯ ತಿಳಿಸಿ ಮುಂದಿನ ದಿನಗಳಲ್ಲಿ ನೇಕಾರ ಸಮಾಜದ ಬಂಧುಗಳು ಒಗ್ಗಟ್ಟಾಗಿ ಸರ್ಕಾರದಿಂದ ಬರುವ ಅನುದಾನಗಳನ್ನು ಪಡೆದುಕೊಳ್ಳುಲು ಅನುಕೂಲವಾಗುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸಲಿ ಎಂದು ಹೇಳಿದರು. ವಂದನಾರ್ಪಣೆಯನ್ನು ಕಾರ್ಯದರ್ಶಿ ನಾಗರಾಜ್ ನೆರವೇರಿಸಿ, ಆಗಮಿಸಿದ ಸಂಕಣ್ಣನವರ ಕುಟುಂಬದವರಿಗೆ ಧನ್ಯವಾದಗಳನ್ನು ತಿಳಿಸಿದರು. ಟ್ರಸ್ಟಿನ ಉಪಾಧ್ಯಕ್ಷ ಸದಾಶಿವಯ್ಯ, ಕಾರ್ಯದರ್ಶಿ ಎನ್ .ನಾಗರಾಜ್, ಖಜಾಂಚಿ ವಿಜೇಂದ್ರಪ್ರಸಾದ್, ಶಂಕರ್, ವಿಶ್ವನಾಥ್, ಕಾಂತರಾಜ್, ಮೋಹನ್, ಹಾಗೂ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳೊಂದಿಗೆ ಕುಟುಂಬದವರು ಭಾಗವಹಿಸಿದ್ದರು.
Comments