ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್......ನಿಮ್ಮ ಬ್ಯಾಂಕ್..ನಿಮ್ಮ ಮನೆ ಬಾಗಿಲಿಗೆ
ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್...ಮನೆ ಮನೆಗೂ ತಮ್ಮ ಬ್ಯಾಂಕ್ ಅನ್ನು ಇಂದು ಭಾರತ ಸರ್ಕಾರದ ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿಯವರು ತಮ್ಮ ಖಾತೆ ತೆರೆಯುವುದರೊಂದಿಗೆ ಉದ್ಘಾಟಿಸಿದರು, ವಿಧಾನ ಪರಿಷತ್ ಸದಸ್ಯರಾದ ಲೆಹರ್ ಸಿಂಗ್ ಶರೋಯ ಲಾಂಛನವನ್ನು ಬಿಡುಗಡೆ ಮಾಡುವುದರ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಡಾ.ರಾಜ್ ಕುಮಾರ್ ಕಲಾ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸೌತ್ ಜೋನ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಿ.ಕೆ.ಮೋಹನ್, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಡಿ.ವೈ.ಎಸ್.ಪಿ. ಮೋಹನ್ ಕುಮಾರ್, ನಗರಸಭಾ ಸದಸ್ಯರಾದ ಎಸ್.ಎ.ಭಾಸ್ಕರ್. ಎಂ.ಶಿವಕುಮಾರ್ ಭಾಗವಹಿಸಿದ್ದರು. ನಗರದಲ್ಲಿ ಮೊದಲು ಖಾತೆ ತೆರೆದ ಮೂವರಿಗೆ ಕ್ಯೂ.ಆರ್. ಕಾರ್ಡ್ ವಿತರಿಸಲಾಯಿತು.
ಕಳೆದ ನೂರ ಅರವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೋಸ್ಟ್ ಆಫೀಸ್ ನಲ್ಲಿ ಇನ್ನು ಮುಂದೆ ಸರಳಗೊಳಿಸಿದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತುಂಬಾ ಸುಲಭವಾಗಿ ವ್ಯವಹಾರ ನಡೆಸಬಹುದು. ನೇರ ನಗದು ಸೌಲಭ್ಯಗಳಾದ ಗ್ಯಾಸ್ ಸಬ್ಸಿಡಿ, ಸಾಮಾಜಿಕ ಭದ್ರತಾ ಪಿಂಚಣಿ, ವಿಧ್ಯಾರ್ಥಿ ವೇತನ ಸಬ್ಸಿಡಿಗಳನ್ನು ಈ ಖಾತೆಯ ಮೂಲಕವೇ ಪಡೆಯಬಹುದು. ಇದರೊಂದಿಗೆ ರೈಲ್ವೈ, ವಿಮಾನ ಟಿಕೆಟ್ ಬುಕಿಂಗ್, ಹಾಗೂ ಆನ್ ಲೈನ್ ಎನ್.ಇ.ಎಫ್.ಟಿ, ಆರ್.ಟಿ.ಜಿ.ಎಸ್, ಐ.ಎಂ.ಪಿ.ಎಸ್. ಸೌಲಭ್ಯಗಳನ್ನು ಹೊಂದಬಹುದಾಗಿದೆ. ಖಾತೆ ತೆರೆಯಲು ಯಾವುದೇ ಅರ್ಜಿ ಫಾರಂ ತುಂಬಬೇಕಾಗಿಲ್ಲ, ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಸಾಕು, ಪ್ರತಿ ವ್ಯವಹಾರಕ್ಕೂ ಎಸ್.ಎಂ.ಎಸ್. ಬರುವುದರಿಂದ ಖಚಿತ ಮತ್ತು ಸುರಕ್ಷಿತ, ಕನಿಷ್ಠ ಠೇವಣಿ, ಮೊತ್ತ ಬೇಕಿಲ್ಲ, ವ್ಯವಹಾರ ಮಾಡಲು ಪಾಸ್ ಬುಕ್ ಬೇಕಿಲ್ಲ, ವ್ಯವಹಾರದ ವಿವರಗಳನ್ನು ಉಚಿತವಾಗಿ ಪಡೆಯಬಹುದು. ಖಾತೆಯ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಬೇಕಿಲ್ಲ, ಕ್ಯೂ.ಆರ್. ಕಾರ್ಡ್ ಸಾಕು, ಕಾರ್ಡ್ ಕಳೆದುಹೋದರೆ ನಿಮ್ಮ ಆಧಾರ್ ಸಂಖ್ಯೆ ಅಥವ ಮೊಬೈಲ್ ಸಂಖ್ಯೆಯಿಂದ ವ್ಯವಹರಿಸಬಹುದು.
Comments