ಕುಮಾರಣ್ಣನ ಖಡಕ್ ಅವಾಜ್ ಗೆ 'ಕೈ' ಕಮಾಂಡೇ ಗಡ ಗಡ..!!
ಮೈತ್ರಿ ಸರ್ಕಾರ ರಚನೆಯದಾಗಿನಿಂದ ಒಂದಲ್ಲ ಒಂದು ತೊಂದರೆಗಳು ಎದುರಾಗುತಲ್ಲೇ ಇವೆ, ಇದನ್ನೆಲ್ಲ ಗಮನಿಸುತ್ತಿದ್ದ ಮಾನ್ಯ ಮುಖ್ಯಮಂತ್ರಿಗಳು ಸರಿಯಾದ ಗುನ್ನವನ್ನೇ ಕೊಟ್ಟಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್ ನವರು ಕುಮಾರಣ್ಣನ ಬಗ್ಗೆ ಮಾತನಾಡೋದ್ ಇರಲಿ ಕೆಮ್ಮಲು ಕೂಡ ಒಂದು ಸೆಕೆಂಡ್ ಯೋಚನೆ ಮಾಡೋ ಪರಿಸ್ಥಿತಿಯನ್ನ ನಿರ್ಮಾಣ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈ ಕಮಾಂಡ್ ರಾಹುಲ್ ಗಾಂಧಿ ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ಭೇಟೆಯ ವೇಳೆ ಕಾಂಗ್ರೆಸ್ ನಾಯಕರ ಬಗ್ಗೆ ಅಸಮಧಾನವನ್ನು ಹೊರ ಹಾಕಿದ್ದಾರೆ.ಹಾಗೆಯೆ ಒಂದು ವೇಳೆ ಮೈತ್ರಿ ಸರಕಾರ ಪತನವಾದರೆ ಅದಕ್ಕೆ ನೇರ ಹೊಣೆ ಕಾಂಗ್ರೆಸ್ ನ ಸಿದ್ದರಾಮಯ್ಯನವರೇ ಎಂದು ಹೇಳಿದ್ದಾರೆ. ಕಾಂಗ್ರೆಸ್ ನ ಜೊತೆ ಮೈತ್ರಿ ಮಾಡಿಕೊಳ್ಳುವುದು ಜೆ ಡಿ ಎಸ್ ಗೆ ಅನಿವಾರ್ಯವಲ್ಲ ಎಂಬ ಮಾತನ್ನು ಹಾಡಿದರೆ ಎಂಬುದು ತಿಳಿದು ಬಂದಿದೆ.ಎಚ್ ಡಿ ಕುಮಾರಸ್ವಾಮಿಯವರು ಕಾರ್ಯಕ್ರಮದಲ್ಲಿ ಮಾತನಾಡುವಾಗ ನಾನು ಎಷ್ಟು ದಿನ ಅಧಿಕಾರದಲ್ಲಿ ಇದ್ದೆ ಎಂಬುದು ಮುಖ್ಯವಲ್ಲ ರಾಜ್ಯದ ಜನತೆಗೆ ಏನು ಮಾಡಿದೆ ಎಂಬುದು ಮುಖ್ಯ, ನಾನು ಎಂದು ಅಧಿಕಾರಕ್ಕೆ ಅಸೆ ಪಟ್ಟವನ್ನಲ್ಲ ಎಂಬುದನ್ನು ಸ್ವಷ್ಟಪಡಿಸಿದ್ದಾರೆ.
Comments