ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ವಿರುದ್ಧ ಅಭ್ಯರ್ಥಿ ಫಿಕ್ಸ್..!
ರಾಜ್ಯ ಬಿಜೆಪಿಯಲ್ಲಿ ಈಗ ಮಂಡ್ಯ ಲೋಕಸಭೆ ಸ್ಥಾನಕ್ಕೆ ಸಂಬಂಧಿಸಿದಂತೆ ವರಿಷ್ಠರ ಮೌನ ಹಲವು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.ದೇವೇಗೌಡರು ಈ ಸಲ ಮಂಡ್ಯ ಲೋಕಸಭೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಸುಳಿವು ಸಿಕ್ಕಿತೋ ಆಗಿನಿಂದ ಬಿಜೆಪಿಯು ಸಹ ಸರಿಯಾದ ನಡೆಯನ್ನೇ ಮುಂದಿಡಲು ಆಲೋಚಿಸುತ್ತಿದೆ. ಎಚ್ ಡಿ ದೇವೇಗೌಡರು ಮಂಡ್ಯದಿಂದ ಸ್ಪರ್ದಿಸಿದರೆ ಮಂಡ್ಯದಿಂದ ಆರ್ ಅಶೋಕ್ ಸ್ವರ್ದಿಸುವ ಸಾಧ್ಯತೆಗಳು ದಟ್ಟವಾಗಿದೆ.
ಮಂಡ್ಯದಲ್ಲಿ ಒಕ್ಕಲಿಗರೇ ಹೆಚ್ಚು ಇರುವುದರಿಂದ ಅಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಆರ್ ಅಶೋಕ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವ ಬಗ್ಗೆ ಆಲೋಚನೆ ನಡೆಯುತ್ತಿದೆ. ದೇವೇಗೌಡರ ವಿರುದ್ಧ ಗೆಲುವು ಅಸಾಧ್ಯದ ಮಾತು. ಆದರೆ ಇದೇ ಸಂದರ್ಭವನ್ನು ಬಳಸಿಕೊಂಡು ಅಲ್ಲಿ ಪಕ್ಷ ಸಂಘಟನೆಯನ್ನು ಗಟ್ಟಿಗೊಳಿಸಿದರೆ ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ ಎಂಬುದು ಒಂದು ಲೆಕ್ಕಾಚಾರ.
Comments