ಸಿದ್ದರಾಮಯ್ಯನ ಅಸ್ತ್ರಕ್ಕೆ ಗೌಡರ ಪ್ರತ್ಯಸ್ತ್ರ ಇದೇನಾ..!!?
ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನಾನೇ ಮುಂದಿನ ಸಿಎಂ ಎಂಬ ಹೇಳಿಕೆ ಕೊಟ್ಟಿದ್ದರು. ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಹೆಚ್.ಡಿ ಕೆ ಅವರು, ಅವರ ಮಾತಿಗೆ ಅಷ್ಟೂ ಮಹತ್ವ ನೀಡುವುದು ಬೇಡ, ಮುಖ್ಯಮಂತ್ರಿ ರೇಸ್ ನಲ್ಲಿ ಸಾಕಷ್ಟು ಜನಇದ್ದಾರೆ, ಆರ್.ವಿ ದೇಶಪಾಂಡೆಯವರು ಕೂಡ ಮುಖ್ಯಮಂತ್ರಿಯಾಗ ಬಹುದು ಅಲ್ಲ್ವಾಎಂದು ಪ್ರಶ್ನೆ ಮಾಡಿ ಈ ಮೂಲಕ ಸಿದ್ದರಾಮಯ್ಯ ಅವರಿಗೆ ಸರಿಯಾಗಿಯೇ ಟಾಂಗ್ ನೀಡಿದ್ದಾರೆ.
ಒಂದೆಡೆ ಕಾಂಗ್ರೆಸ್ ಸೋತು ಸುಣ್ಣವಾಗಿದ್ದರು ಸಿದ್ದರಾಮಯ್ಯನವರು ಎಲ್ಲೆಡೆ ನಾನೇ ಮುಂದಿನ ಮುಖ್ಯಮಂತ್ರಿ ಯಾಗುವುದಾಗಿ ಹೇಳಿಕೊಂಡು ಬಂದಿದ್ದಾರೆ. ಇದಕ್ಕೆ ಎಚ್ ಡಿ ಕುಮಾರಸ್ವಾಮಿ ಯವರು ಮುಖ್ಯಮಂತ್ರಿ ಯಾದರೆ ನನಗು ಸಂತೋಷ ಎಂದು ಹೇಳಿದ್ದರು. ಮತ್ತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯನವರು ನಾನು ಹೇಳಿದ್ದು ಮುಂದಿನ ಚುನಾವಣೆಯಲ್ಲಿ ಜನರು ಕಾಂಗ್ರೆಸನ್ನು ಗೆಲ್ಲಿಸಿದರೆ ಮುಖ್ಯಮಂತಿಯಾಗುವುದಾಗ್ಗಿ ಹೇಳಿದ್ದೇನೆ ಎಂದು ಸ್ವಷ್ಟ ಪಡಿಸಿದರು,
Comments