"ಸಿದ್ದರಾಮಯ್ಯ CM ಆಗಲು ಸಾಧ್ಯವಿಲ್ಲ"..!! ಎಚ್ ಡಿ ಕೆ ಪರ ಬ್ಯಾಟಿಂಗ್..!?

ಮುಖ್ಯ ಮಂತ್ರಿ ವಿಚಾರವಾಗಿ ಮೇಲಿಂದ ಮೇಲೆ ಅನೇಕ ವಿಷಯಗಳು ಕೇಳಿಬರುತ್ತಿದ್ದು, ಈಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಕೊಳ್ಳೇಗಾಲದಲ್ಲಿ ಹೇಳಿಕೆಯನ್ನು ನೀಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮಾಜಿ ಸಿ ಎಂ ಅದ ಸಿದ್ದರಾಮಯ್ಯ ನವರು ಮತ್ತೆ ಸಿ ಎಂ ಆಗಲು ಸಾಧ್ಯವಿಲ್ಲ ನನ್ನ ಬೆಂಬಲ ಯಾವತ್ತೂ ಕುಮಾರಸ್ವಾಮಿಗೆ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಕಳೆದ 10 ವರ್ಷಗಳಿಂದ ರೈತರು ಬರದಿಂದ ಕಂಗೆಟ್ಟಿದರು ಅವರಿಗಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಯವರು ಸಾಲದಿಂದ ಋಣ ಮುಕ್ತರಾಗಿಸಲು ದಿಟ್ಟ ನಿರ್ಧಾರವನ್ನು ಕೈಗೊಂಡಿದೆ ಅದರಿಂದ ನನ್ನ ಬೆಂಬಲ ಯಾವತ್ತೂ ಕುಮಾರಸ್ವಾಮಿಯವರಿಗೆ ಎಂದು ಹೇಳಿದ್ದಾರೆ.
Comments