ಹೇಮಾವತಿಪೇಟೆಯ ಮುತ್ಯಾಲಮ್ಮ ಸೇವಾ ಸಮಿತಿ ಮತ್ತು ಹೇಮಾವತಿಪೇಟೆ ಯುವಕ ಸಂಘದ ವತಿಯಿಂದ ನೆರೆ ಪರಿಹಾರ ನಿಧಿ ತಹಸೀಲ್ದಾರ್ ಕೈಗೆ ಹಸ್ತಾಂತರ




ಕಳೆದ ಎರಡು ವಾರಗಳಿಂದ ಜಲ ಪ್ರಳಯದಿಂದ ನೊಂದಿರುವ ಕೊಡಗಿನ ಜನರಿಗಾಗಿ ನಗರದ ದೇವಾಂಗಪೇಟೆ ಯುವಕ ಸಂಘ ಮತ್ತು ಮುತ್ಯಾಲಮ್ಮ ಸೇವಾ ಸಮಿತಿ ಯುವಕರು ತಮ್ಮ ಪೇಟೆಯಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ತರಿಂದ ನಿಧಿ ಸಂಗ್ರಹಿಸಿದ್ದರು. ಕಳೆದ ವಾರ ಸಂಗ್ರಹಿಸಿದ್ದ ಒಟ್ಟು ಮೊತ್ತ ಮುವತ್ತಮೂರುಸಾವಿರದ ಮುನ್ನೂರ ಮೂವತ್ತಮೂರು [33,333] ರೂ.ಗಳ ಡಿ.ಡಿ ಯನ್ನು ಇಂದು ರಾಜ್ಯದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಲು ದೊಡ್ಡಬಳ್ಳಾಪುರ ನಗರದ ತಹಸೀಲ್ದಾರ್ ಬಿ.ಎ.ಮೋಹನ್ ರವರಿಗೆ ನಗರಸಭಾ ಸದಸ್ಯ ಎಸ್.ಎ.ಭಾಸ್ಕರ್ ಮತ್ತು ಯುವಕ ಸಂಘದ ಡಿ.ಎ.ಲಕ್ಷ್ಮೀಕಾಂತ ಮುತ್ಯಾಲಮ್ಮ ಸೇವಾ ಸಮಿತಿ ಮತ್ತು ಯುವಕ ಸಂಘದ ಪರವಾಗಿ ನೀಡಿದರು. ದೇಣಿಗೆ ಸಂಗ್ರಹಿಸಲು ನೆರವಾದ ಸಂಘದ ಕಿರಣ್, ರಾಘು, ರೇವಂತ್, ದಿನ್ನೆ ಮಹೇಶ್, ಗುಜ್ಜಿ ನವೀನ್, ನಾಗಣ್ಣ, ಲಕ್ಷ್ಮಣ್,ಪರಪ್ಪ, ರಮೇಶ್, ಮಹದೇವ್, ನರೇಶ್ ಮತ್ತಿತರ ಸದಸ್ಯರಿಗೆ ಮತ್ತು ನೆರವು ನೀಡಿದ ವ್ಯಾಪಾರಸ್ತರು ಮತ್ತು ಸಾರ್ವಜನಿಕರಿಗೆ ಅಧ್ಯಕ್ಷ ಚೌಡಪ್ಪ ಧನ್ಯವಾದಗಳನ್ನು ತಿಳಿಸಿದರು.
Comments