ಪುಷ್ಪ ನಮನದೊಂದಿಗೆ ನೂರೊಂದು ಗಿಡ ನೆಡುವ ಮೂಲಕ ವಾಜಪೇಯಿಗೆ ಗೌರವ ಸಲ್ಲಿಕೆ
ದೊಡ್ಡಬಳ್ಳಾಪುರ ತಾ, ದೊಡ್ಡತುಮಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ಪುಷ್ಪ ನಮನ ಸಲ್ಲಿಸಿ 101 ಗಿಡಗಳನ್ನು ನೆಡುವುದರ ಮೂಲಕ ಮಾಜಿ ಪ್ರಧಾನ ಮಂತ್ರಿಗೆ ಗೌರವ ಸಲ್ಲಿಸಲಾಯಿತು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ,ಜಿ.ಮಂಜುನಾಥ್ ಮಕ್ಕಳಿಗೆ ವಾಜಪೇಯಿಯವರ ವ್ಯಕ್ತಿತ್ವದ ಕಿರು ಪರಿಚಯ ಮಾಡಿಕೊಟ್ಟರು, ಕಾರ್ಯಕ್ರಮದ ಅಂಗವಾಗಿ ಗ್ರಾಮದ ಮನೆಗಳಲ್ಲಿ ತಾಯಂದಿರು ಸಿದ್ದ ಪಡಿಸಿದ ವಿವಿಧ ತಿಂಡಿ ತಿನಿಸುಗಳ ಸಹ ಭೋಜನ ಏರ್ಪಡಿಸಲಾಗಿತ್ತು, ಕಾರ್ಯಕ್ರಮದಲ್ಲಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಕಾಂತರಾಜು, ನಿವೃತ್ತ ಮುಖ್ಯೋಪಾಧ್ಯಯ ವಿಜಯಕುಮಾರ್, ಪ್ರದಾನ ಕಾರ್ಯದರ್ಶಿ ನಾಗರಾಜು, ಮುನಿರಾಜಪ್ಪ, vssn ಮಾಜಿ ಅಧ್ಯಕ್ಷ ಟಿ ಎನ್ ನಾಗರಾಜು( ಬಾಬು ) ಗ್ರಾ.ಪಂ.ಉಪಾಧ್ಯಕ್ಷ TA ರವಿಕುಮಾರ್, ಮಾಜಿ ಉಪಾಧ್ಯಕ್ಷ Sst ಮಂಜುನಾಥ್, ಸದಸ್ಯರಾದ ವೀಣಾ ಲೋಕೇಶ್, ನರಸಿಂಹರಾಜು, ಶಾಲಾ ಮುಖ್ಯೋಪಾಧ್ಯಾಯೆ ಶ್ರೀಮತಿ ಶಮಿದ ಬಾನು, ಶಾಲಾ ಶಿಕ್ಷಕವೃಂದ, ಗ್ರಾಮಸ್ಥರು, ಮಕ್ಕಳು ಭಾಗವಹಿಸಿದ್ದರು.
Comments