ವಾಜಪೇಯಿಯವರನ್ನು ಕಳೆದುಕೊಂಡಂತೆ ಮೋದಿಯವರನ್ನು ಕಳೆದುಕೊಳ್ಳುವುದು ಬೇಡ..... ಖಾನಿಮಠಾಧೀಶ ಶ್ರೀ ಶ್ರೀ ಬಸವರಾಜ ಸ್ವಾಮಿ







ದೊಡ್ಡಬಳ್ಳಾಪುರ ತಾಲ್ಲೂಕಿನ ನಮೋ ಸೇನೆ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನಾ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ ಇಂದು ಬೆಳಿಗ್ಗೆ 11-30 ಘಂಟೆಗೆ ನಗರದ ಹೊಸ ಬಸ್ ನಿಲ್ದಾಣ ರಸ್ತೆಯಲ್ಲಿರುವ ಕನ್ನಡ ಜಾಗೃತ ಭವನದಲ್ಲಿ ನೆರವೇರಿಸಲಾಯಿತು, ಪ್ರಾಸ್ತಾವಿಕ ನುಡಿಗಳನ್ನು ನಮೋ ಸೇನೆಯ ಮಾರ್ಗದರ್ಶಕ ರವಿಮಾವಿನಕುಂಟೆ ಮಾತನಾಡುತ್ತಾ ನಮ್ಮ ತಾಲ್ಲೂಕಿನ ನಮೋ ಸೇನೆಯ ಗುರಿ ಒಂದೇ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮುಂದಿನ ಅವಧಿಗೂ ಸನ್ಮಾನ್ಯ ನರೇಂದ್ರ ಮೋದಿಯವರೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಬೇಕು, ಆ ನಿಟ್ಟಿನಲ್ಲಿ ನಮ್ಮ ತಾಲ್ಲೂಕಿನಲ್ಲಿ ಸಂಘಟನೆ ಮಾಡುವುದಷ್ಟೇ ನಮ್ಮ ಧ್ಯೇಯ, ನಮ್ಮ ದೇಶವನ್ನು ಮುನ್ನೆಡೆಸಲು ಇಷ್ಟು ವರ್ಷಕ್ಕೆ ಒಬ್ಬ ಯೋಗ್ಯ ವ್ಯಕ್ತಿ ದೊರಕಿದ್ದಾರೆ, ನಮೋ ಸೇನೆಯ ಹುಡುಗರು ಯಾವುದೇ ಪಕ್ಷದ ಕಾರ್ಯಕರ್ತರಲ್ಲ, ಅವರಿಗೆ ಯಾವುದೇ ಪದವಿ ಬೇಕಾಗಿಲ್ಲ, ಯಾರ ಅಡಿಯಲ್ಲೂ ನಾವು ಕೆಲಸ ಮಾಡುವುದಿಲ್ಲ, ನಮ್ಮ ಗುರಿ ಒಂದೇ ಅದು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳಿ, ನಮೋ ಸೇನೆಯ ಯುವಕರು ನಿಸ್ವಾರ್ಥವಾಗಿ ಮಾಡುತ್ತಿರುವ ಕಾರ್ಯಕ್ಕೆ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಬೆಳವಂಗಲದ ಖಾನಿಮಠಾಧೀಶ ಶ್ರೀ ಶ್ರೀ ಬಸವರಾಜ ಸ್ವಾಮಿ ವಹಿಸಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು, ಕೆ.ಎಂ.ಎಫ್, ಸಹಕಾರ ಭಾರತಿ ಪ್ರಮುಖ ಮಂಜೇನಹಳ್ಳಿ ರಾಮಚಂದ್ರಾಚಾರ್ ಅನಂತ್ ಸ್ವತಂತ್ರ ಭಾರತ ಮತ್ತು ಮೋದಿ ಕುರಿತಂತೆ ಉಪನ್ಯಾಸ ನೀಡಿದರು. ಹೆಚ್. ಸದಾನಂದಗೌಡರು, ಸಮಗ್ರ ಕೃಷಿ ಪದ್ದತಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು [ತಪಸೀ ಹಳ್ಳಿ] ಎಂ.ಜೆ ರಾಜಶೇಖರ್ ಶೆಟ್ಟಿ, ಸಂಪಾದಕರು. ಹಾಯ್ ದೊಡ್ಡಬಳ್ಳಾಪುರ [ದೊಡ್ಡಬಳ್ಳಾಪುರ] ಲಕ್ಷ್ಮೀಗೌಡರು, ಸಾವಯವ ಕೃಷಿ ಮತ್ತು ಹೈನುಗಾರಿಕೆ, [ಕುಂಟನಹಳ್ಳಿ] ಬಿ.ಎಂ. ಮಂಜುನಾಥ್, ಸೈನಿಕರು, [ಬಲ್ಲೇನಹಳ್ಳಿ] ಚನ್ನಮಾರಯ್ಯ, ನಿವೃತ್ತ ಸೈನಿಕರು, [ಸೊನ್ನೇನ ಹಳ್ಳಿ] ಡಾ.ಚೌಡಯ್ಯ, ವೈದ್ಯಕೀಯ ಕ್ಷೇತ್ರ, [ದೊಡ್ಡಬಳ್ಳಾಪುರ] ಮಹಾಲಿಂಗಯ್ಯ, ನಿವೃತ್ತ ಶಿಕ್ಷಕರು, [ದೊಡ್ಡಬಳ್ಳಾಪುರ] ರಾಜಶೇಖರ್, ಶಿಕ್ಷಕರು, [ದೊಡ್ಡಬಳ್ಳಾಪುರ] ಪಂಜಿನಿ ವೆಂಕಟೇಶ, ವಾಣಿಜ್ಯೋದ್ಯಮಿಗಳು ಮತ್ತು ಸಮಾಜ ಸೇವಕರು, [ದೊಡ್ಡಬಳ್ಳಾಪುರ] ವೆಂಕಟೇಶ ಲೇಖಕರು, ಇತಿಹಾಸ ಸಂಶೋಧಕರು, [ದೊಡ್ಡಬಳ್ಳಾಪುರ] ಈ ಎಲ್ಲ ಸನ್ಮಾನಿತರಿಗೂ ನಮೋ ಸೇನೆಯ ಯುವಕರು ಗೌರವಾನ್ವಿತವಾಗಿ ಸನ್ಮಾನಿಸಿದರು. ಜಿಂಕೆಬಚ್ಚಳ್ಳಿ ಕೆಂಪೇಗೌಡರು ನಮೋ ಸೇನೆ ಧ್ಯೇಯ, ಗುರಿ ಕುರಿತು ಮಾತನ್ನಾಡಿದರು, ಪ್ರೋಫೆಸರ್ ಸುನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಎಸ್.ಎಂ.ಗೊಲ್ಲಹಳ್ಳಿ ಬಸವರಾಜ್, ಕೊನಘಟ್ಟ ರಮೇಶ್, ಗಿರೀಶ್, ಕುಂಟನಹಳ್ಳಿ ಹರೀಶ್, ತ್ಯಾಗರಾಜ್, ಅರುಣ ಹಾಜರಿದ್ದರು.
ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ರಾಖಿ ಕಟ್ಟುವುದರ ಮೂಲಕ ಸಹೋದರಿಯರಾದ ಉಮಾಮಹೇಶ್ವರಿ, ಕಮಲ, ದಾಕ್ಷಾಯಿಣಿ, ವತ್ಸಲ, ಗಿರಿಜ ವಿಶೇಷವಾಗಿ ರಾಖಿ ಹಬ್ಬವನ್ನು ಆಚರಿಸಿದರು.
Comments