ಶ್ರೀ ನಗರೇಶ್ವರಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಸದಸ್ಯರು ಮತ್ತು ಗೆಳೆಯರು ಕೊಡಗಿನಲ್ಲಿ
ಶನಿವಾರ ರಾತ್ರಿ ಹನ್ನೊಂದು ಘಂಟೆಗೆ ನಗರದ ಮುಖ್ಯ ರಸ್ತೆಯಲ್ಲಿರುವ ಶ್ರೀ ನಗರೇಶ್ವರಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಮತ್ತು ಗೆಳೆಯರು ಕೊಡಗಿನಲ್ಲಿ ನೆರೆಹಾವಳಿಗೆ ತುತ್ತಾಗಿರುವ ಬಂಧುಗಳಿಗೆ ಸಹಾಯ ಹಸ್ತ ನೀಡಲು ಹೊರಟರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಹಿತೈಷಿಗಳು ಮತ್ತು ಸ್ನೇಹಿತರ ಸಹಾಯದಿಂದ ಫೆನಾಯಿಲ್, ಡಿಡಿಟಿ, ಬೆಡ್ ಷೀಟ್, ಪೆಟ್ಟಿಕೋಟ್, ಮಹಿಳೆಯರು ಮತ್ತು ಮಕ್ಕಳ ಒಳ ಉಡುಪುಗಳು, ಲೆಗ್ಗಿಂಗ್ಸ್, ನೈಟಿ, ಸೀರೆಗಳು, ಲೋಟ,ತಟ್ಟೆ, ಬಕೆಟ್, ಟಿ ಷರ್ಟ್, ಜೀನ್ಸ್ ಪ್ಯಾಂಟ್, ಟವೆಲ್, ಟೂತ್ ಪೇಸ್ಟ್, ನೀರಿನ ಬಾಟಲ್, ಪಾತ್ರೆ ಸಾಮಾನುಗಳು, ಗ್ಯಾಸ್ ಸ್ಟವ್, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಬ್ಯಾಗ್, ಹಾಲಿನಪುಡಿ ಮತ್ತಿತರ ಸಾಮಾಗ್ರಿಗಳು ಸೇರಿದಂತೆ ಒಟ್ಟು ಐದು ಲಕ್ಷದಷ್ಟು ವಸ್ತುಗಳನ್ನು ಸಂಘದ ಸದಸ್ಯರು ತೆಗೆದುಕೊಂಡು ಹೊರಟರು. ಶ್ರೀ ಪ್ರಯುಕ್ತಿ ಸೇವಾ ಟ್ರಸ್ಟ್ ವತಿಯಿಂದ ನೆರೆ ಸಂತ್ರಸ್ತರಿಗೆ ಸಹಾಯ ನೀಡಲು ಡಾ.ಅಂಬಿಕ ಮತ್ತು ಗೆಳೆಯರು ಶನಿವಾರ ಬೆಳಿಗಿನ ಜಾವ ಹೊರಟು ತಮ್ಮ ತಂಡದವರೊಂದಿಗೆ ಕೊಡಗಿನ ವಿವಿದ ಕಡೆಗಳಲ್ಲಿ ಸಂತ್ರಸ್ತರನ್ನು ಭೇಟಿಯಾಗಿ ನೆರವು ನೀಡುತ್ತಿದ್ದಾರೆ.
Comments