ಖಾಸಗಿ ಹಾಗೂ ಮೀಟರ್ ಬಡ್ಡಿ ದಂಧೆಕೋರರಿಗೆ ಬಿಗ್ ಬ್ರೇಕ್ ಹಾಕಿದ ಸಿಎಂ ಕುಮಾರಸ್ವಾಮಿ..!

ಜೆಡಿಎಸ್, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯದ ರೈತರ ಸಾಲ ಮನ್ನಾ ಮಾಡಿದೆ. ಬಜೆಟ್ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಕುರಿತು ಪ್ರಕಟಿಸಿದ್ದು, ಆ ಬಳಿಕ ಮೊದಲ ಹಂತದಲ್ಲಿ ಸಹಕಾರಿ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಮಾಡಿ ಅಧಿಸೂಚನೆ ಹೊರಡಿಸಲಾಗಿತ್ತು.
ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಕುರಿತು ಗೊಂದಲ ಉಂಟಾಗಿತ್ತಾದರೂ ಸರ್ಕಾರ ಅದನ್ನು ಲೆಕ್ಕಿಸದೆ ಈಗ ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಜೊತೆಗೆ ಖಾಸಗಿ ಲೇವಾದೇವಿಗಾರರು ಹಾಗೂ ಮೀಟರ್ ಬಡ್ಡಿಯಲ್ಲಿ ತೊಡಗಿಕೊಂಡಿರುವವರಿಗೆ ಶಾಕ್ ನೀಡಲಾಗಿದ್ದು, ಬಡ ವರ್ಗದ ಜನತೆಗೆ ನೆಮ್ಮದಿ ಸಿಗಲಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲ ಹಂತಹಂತವಾಗಿ ಮನ್ನಾವಾಗಲಿದ್ದು, ರಾಜ್ಯದ ಸುಮಾರು 23 ಲಕ್ಷ ರೈತರು ಇದರ ಲಾಭ ಪಡೆಯಲಿದ್ದಾರೆ. ಖಾಸಗಿ ಸಾಲ ಮನ್ನಾ ಮಾಡುವ ಐತಿಹಾಸಿಕ 'ಋಣ ಪರಿಹಾರ ಅಧಿನಿಯಮ 2018'ಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಖಾಸಗಿ ಲೇವಾದೇವಿಗಾರರು ಹಾಗೂ ಮೀಟರ್ ಬಡ್ಡಿ ದಂಧೆಕೋರರಿಗೆ ಮರ್ಮಾಘಾತ ನೀಡಿದೆ.
Comments