ಸಂತ್ರಸ್ತರಿಗೆ ನೆರವು ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟ ಎಚ್’ಡಿಡಿ
ಸತತವಾಗಿ ಸುರಿದ ಭೀಕರ ಮಳೆಯಿಂದಾಗಿ ಮಲೆನಾಡಿನಲ್ಲಿ ಹಾನಿಗೀಡಾಗಿರುವ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸ್ಪಂದಿಸಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲು ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೂಚಿಸಿದರು.
ವರುಣನ ಆರ್ಭಟಕ್ಕೆ ಮಲೆನಾಡಿನಲ್ಲಿ ಹಾನಿಗೀಡಾಗಿರುವ ಸಕಲೇಶಪುರ ತಾಲ್ಲೂಕಿನ ಉಚ್ಚಂಗಿ, ಹಿಜ್ಜನಹಳ್ಳಿ, ಮಾಗೇರಿ, ಬಿಸಲೆ ಪ್ರದೇಶಗಳಿಗೆ ಎಚ್.ಡಿ. ದೇವೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯ ಪ್ರಮಾಣವನ್ನು ವೀಕ್ಷಣೆ ಮಾಡಿದ ದೇವೇಗೌಡರು, ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Comments