ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ...ಪ್ರಶಸ್ತಿ ಪತ್ರ ಮತ್ತು ಚೆಕ್ ವಿತರಣೆ
ಕರ್ನಾಟಕ ರಾಜ್ಯ ದೇವಾಂಗ ಸಂಘ ರಿ. ಇವರು ತಮ್ಮ ವಿದ್ಯಾ ನಿಧಿ ಯೋಜನೆ ಅಡಿಯಲ್ಲಿ ದೇವಾಂಗ ಜನಾಂಗದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವಸಲುವಾಗಿ ಕಳೆದ ಎರಡು ವರ್ಷಗಳಿಂದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯೂ.ಸಿ ಪರೀಕ್ಷೆಗಳಲ್ಲಿ ಶೇ. ತೊಂಬತ್ತಕ್ಕಿಂತ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದಾರೆ. ಇದರ ಅಂಗವಾಗಿ 2017-18 ನೇ ಸಾಲಿನಲ್ಲಿ ಅತಿಹೆಚ್ಚು ಅಂಕ ಗಳಿಸಿದ್ದ ಒಟ್ಟು 101 ಮಂದಿ ವಿದ್ಯಾರ್ಥಿಗಳನ್ನು ಕರ್ನಾಟಕದಾದ್ಯಂತ ಗುರುತಿಸಲಾಗಿದ್ದು ಅದರಲ್ಲಿ ನಮ್ಮ ದೊಡ್ಡಬಳ್ಳಾಪುರದ ಎಂಟು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಆಗಸ್ಟ್ ಐದರಂದು ಬನಶಂಕರಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಇಬ್ಬರು ಭಾಗವಹಿಸಿ ಪ್ರಶಸ್ತಿ ಪತ್ರ ಮತ್ತು ಬಹುಮಾನದ ಮೊತ್ತವನ್ನು ಪಡೆದಿದ್ದರು, ಉಳಿದ ಆರು ಮಂದಿ ವಿದ್ಯಾರ್ಥಿನಿಯರಾದ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕಪಡೆದ ತೇಜಸ್ವಿನಿ ಪಿ.ಎಸ್. ಮಂಜುಶ್ರೀ ಬಿ.ಎ. ತೇಜಸ್ವಿನಿ ಕೆ.ಎಸ್. ಮತ್ತು ದ್ವಿತೀಯ ಪಿ.ಯೂ.ಸಿ.ಯಲ್ಲಿ ಹೆಚ್ಚು ಅಂಕ ಗಳಿಸಿದ ಕೀರ್ತಿ ಪಿ.ಎಲ್. ದಿವ್ಯಶ್ರೀ ಜೆ.ಎಂ. ಭೂಮಿಕಾ ಕೆ.ಎನ್. ಇವರಿಗೆ ಇಂದು ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಕಾರ್ಯಾಲಯದಲ್ಲಿ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಂಘದ ಸಹ ಕಾರ್ಯದರ್ಶಿ ಪಿ.ಸಿ.ಲಕ್ಷ್ಮೀನಾರಾಯಣ್, ಸಂಘಟನಾ ಕಾರ್ಯದರ್ಶಿಗಳಾದ ಎಂ.ಕೆ.ವತ್ಸಲ, ಆರೂಡಿ ರಮೇಶ್, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟೀಗಳಾದ ಎಸ್. ಶಿವಾನಂದ, ಕೆ.ಎಂ. ಕೃಷ್ಣಮೂರ್ತಿ, ಕೆ.ವಿ.ಸುಧಾಕರ್, ಡಿ.ಆರ್.ನರಸಿಂಹಮೂರ್ತಿ, ಹೆಚ್.ಎಸ್. ಶಿವಶಂಕರ್, ನಗರ ಬಿಜೆಪಿ ಮಹಿಳಾ ಅಧ್ಯಕ್ಷೆ ಶ್ರೀಮತಿ ಗಿರಿಜ ಮತ್ತು ಪೋಷಕರು ಭಾಗವಹಿಸಿದ್ದರು.
Comments