ವಿವಿಧ ಸಂಘಟನೆಗಳಿಂದ ಕೊಡಗಿನ ಸಂತ್ರಸ್ತರಿಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಹಣ,ಬಟ್ಟೆ ಸಂಗ್ರಹ





ದಿ. 20/8/2018 ನೇ ಸೋಮವಾರ ಬೆಳಿಗ್ಗೆ ಹತ್ತು ಘಂಟೆಗೆ ದೊಡ್ಡಬಳ್ಳಾಪುರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಭುವನೇಶ್ವರಿ ಕನ್ನಡ ಸಂಘ, ರಕ್ಷಣಾ ವೇದಿಕೆ ಶಿವರಾಮೇ ಗೌಡರ ಬಣ, ಚೌಡೇಶ್ವರಿ ನೇಕಾರರ ಸಂಘ ಹಾಗೂ ಅನೇಕ ಕನ್ನಡ ಸಂಘಟನೆಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಕೊಡಗು ಜಿಲ್ಲೆ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಕ್ಕಾಗಿ ಕಾಲ್ನಡಿಗೆಯಲ್ಲಿ ಊರಿನ ಪ್ರಮುಖ ರಸ್ತೆಗಳಲ್ಲಿ ಹೊರಟು ಸಹೃದಯೀ ನಾಗರೀಕರು ಮತ್ತು ವ್ಯಾಪಾರಸ್ತರಿಂದ ಹಣ, ದವಸ, ಔಷಧಿ ಹಾಗೂ ಇನ್ನಿತರ ಉಪಯೋಗಿ ವಸ್ತುಗಳನ್ನು ಸಂಗ್ರಹಿಸಿ ಈ ದಿನವೇ ಕೊಡಗಿನ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು. ಹಣ ಸಂಗ್ರಹ ಕಾರ್ಯದಲ್ಲಿ ಕಸಾಪ ಅಧ್ಯಕ್ಷೆ ಪ್ರಮೀಳ ಮಹದೇವ್ ಮತ್ತು ಪದಾಧಿಕಾರಿಗಳು, ಡಾ.ರಾಜ್ ಅಭಿಮಾನಿ ಸಂಘದ ಕೆ.ಕೆ.ವೆಂಕಟೇಶ್ ಮತ್ತು ಪದಾಧಿಕಾರಿಗಳು, ಹಿರಿಯ ಪತ್ರಕರ್ತ ರಾಜೇಂದ್ರ ಕುಮಾರ್ ಶೆಟ್ಟಿ ಮತ್ತು ಎಲ್ಲಾ ಸಂಘಟನೆಗಳ ಪದಾಧಿಕಾರುಗಳು ಭಾಗವಹಿಸಿದ್ದರು. ಈ ಕಾರ್ಯದಲ್ಲಿ ಸಹಕರಿಸಿ ತಮ್ಮ ಕೈಲಾದ ಸಹಾಯ ಹಸ್ತ ನೀಡಿದ ಹೃದಯವಂತರಿಗೆ ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ಕಸಾಪ ಅಧ್ಯಕ್ಷೆ ಪ್ರಮೀಳ ಮಹದೇವ್ ಅರ್ಪಿಸಿದರು.
Comments