ರೇಷ್ಮೆ ನಗರಿದಿಂದ ಕೊಡಗಿಗೆ ಹೊರಟ ಮತ್ತಷ್ಟು ಮಂದಿ
ದಿನಾಂಕ 19/8/2017 ರಂದು ದೊಡ್ಡಬಳ್ಳಾಪುರ ದೇವರಾಜನಗರದ ರಾಷ್ಟೀಯ ಸ್ವಯಂ ಸೇವಕ ಸಂಘ, ಸೇವಕ್ ಸಂಸ್ಥೆ, ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘ, ಆರ್ಯಸ ವೈಶ್ಯ ಮಂಡಲಿ, ವಾಸವಿ ಯುವಜನ ಸಂಘ,ವಾಸವಿ ಮಹಿಳಾ ಮಂಡಲಿ, ಡಿ.ಜೆ. ಡ್ಯಾನ್ಸ್ ಸ್ಟುಡಿಯೋ ವತಿಯಿಂದ ಮಡಿಕೇರಿಯಲ್ಲಿ ಇತ್ತೀಚೆಗೆ ನೆರೆಹಾವಳಿಗೆ ತುತ್ತಾಗಿರುವ ಬಂಧುಗಳಿಗೆ ಸಹಾಯ ಮಾಡಲು ಹೊರಟರು. ರಾಷ್ಟೀಯ ಸ್ವಯಂ ಸೇವಕ ಸಂಘ,ದೇವರಾಜನಗರ ವತಿಯಿಂದ ಔಷಧಿಗಳು, ಹಾಸಲು, ಹೊದೆಯಲು, ಉಡುಪುಗಳು, ಲೋಟ,ತಟ್ಟೆ, ತಿಂಡಿತಿನಿಸುಗಳನ್ನು ಬಜರಂಗ ದಳ ಯುವಕರ ಹದಿನೈದು ಮಂದಿಯೊಂದಿಗೆ ಕಳುಹಿಸಲಾಯಿತು, ಸೇವಕ್ ಸಂಸ್ಥೆ ವತಿಯಿಂದ ಮೇಸ್ಟ್ರು ನರಸಿಂಹಮೂರ್ತಿ ಬರಗೂರ್ ನೇತೃತ್ವದಲ್ಲಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ, ಮಾರ್ಕೆಟ್ ಚೌಕ ಇಲ್ಲಿ ಆರು ಸಾವಿರ ಚಪಾತಿ ಮತ್ತು ಉಪ್ಪಿನಕಾಯಿ ತಯಾರಿಸಿ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು, ಅರವತ್ತು ಮಂದಿ ಮಹಿಳೆಯರು ಬೆಳಿಗಿನಿಂದಲೇ ಚಪಾತಿ ತಯಾರಿಸಿ ಕೊಟ್ಟರು, ಇದರ ಜೊತೆಯಲ್ಲಿ ಟೂತ್ ಪೇಸ್ಟ್, ನೀರಿನ ಬಾಟಲ್, ಬಟ್ಟೆಗಳನ್ನು ಕಳುಹಿಸಲಾಯಿತು.
ಮಂಜುನಾಥ್ ಮತ್ತು ತಂಡದ ಸದಸ್ಯರು ನಗರದ ರೈಲ್ವೆ ನಿಲ್ದಾಣದ ಆರ್ಮ್ಯಾಕ್ಸ್ ಕಾರ್ಯಾಲಯದಲ್ಲಿ ಸಂಗ್ರಹಿಸಿದ್ದ ಎರಡನೇ ಲೋಡ್ ಮೂಲಬೂತ ವಸ್ತುಗಳನ್ನು ಬೆಂಗಳೂರಿನಲ್ಲಿರುವ ಕೊಡವ ಸಮಾಜಕ್ಕೆ ತಲುಪಿಸಿದರು. ನಗರದ ಖಾಸ್ ಭಾಗ್ ನಲ್ಲಿ ಚಿಕ್ಕ ಗಾರ್ಮೆಂಟ್ ಫ್ಯಾಕ್ಟರಿ ನಡೆಸುತ್ತಿರುವ ಕುಮಾರ್ ಮತ್ತು ಸಂಗಡಿಗರು ಆರುನೂರು ಟಿ ಷರ್ಟ್, ನೂರು ಮಹಿಳೆಯರ ಲೆಗ್ಗಿಂಗ್ಸ್, ಬರ್ಮುಡಾ ನಿಕ್ಕರ್, ಮಕ್ಕಳ ಟಿ ಷರ್ಟ್ ತೆಗೆದುಕೊಂಡು ಮಡಿಕೇರಿಯ ಹಿಂದೂ ಜಾಗರಣ ವೇಧಿಕೆಗೆ ತಲುಪಿಸಲು ಹೊರಟರು. ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಮತ್ತು ಡಿ.ಜೆ. ಡ್ಯಾನ್ಸ್ ಸ್ಟುಡಿಯೋ ಪದಾಧಿಕಾರಿಗಳು ತಾವು ನಗರದ ಜನತೆಯಿಂದ ಸಂಗ್ರಹಿಸಿದ್ದ ವಸ್ತುಗಳೊಂದಿಗೆ ನೆನ್ನೆ ರಾತ್ರಿ ಕೊಡಗಿನ ಸಂತ್ರಸ್ಥರಿಗೆ ತಲುಪಿಸಲು ಹೊರಟರು.
Comments