ಪ್ರಜ್ವಲ್ ರೇವಣ್ಣ ನವರ ರಾಜಕೀಯ ಭವಿಷ್ಯದ ಬಗ್ಗೆ ಸುಳಿವು ಕೊಟ್ಟ ಸಚಿವ ವಿಶ್ವನಾಥ್

17 Aug 2018 3:22 PM |
11460 Report

ನಾಯಕತ್ವದ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಸಚಿವ ಎಚ್.ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಎಚ್.ವಿಶ್ವನಾಥ್ ಹೇಳಿದರು.

"ಪ್ರಜ್ವಲ್ ರಾಜಕೀಯ ಭವಿಷ್ಯ ಉಜ್ವಲವಾಗಿದೆ. ಆತನಿಗೆ ಸಾಕಷ್ಟು ದೂರದೃಷ್ಟಿ ಇದ್ದು, ಕನ್ನಡ ಹಾಗೂ ಇಂಗ್ಲಿಷ್ ಭಾಷೆ ಮೇಲೆ ಹಿಡಿತವಿದೆ. ಅಲ್ಲದೆ, ನಾಯಕತ್ವದ ಗುಣಗಳನ್ನೂ  ಮೈಗೂಡಿಸಿ ಕೊಂಡಿದ್ದಾರೆ. ಹೀಗಾಗಿ ಆತ ರಾಜಕೀಯದಲ್ಲಿ ಉತ್ತಮವಾಗಿ ಬೆಳೆಯುವ ಭರವಸೆಯ ನಾಯಕನಾಗಲಿದ್ದಾರೆ, ಇದನ್ನು ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

Edited By

hdk fans

Reported By

hdk fans

Comments