ಅಜಾತಶತ್ರು, ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ






ದಿನಾಂಕ 16-8-2018 ರ ರಾತ್ರಿ ಎಂಟು ಘಂಟೆಗೆ ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಸಿದ್ದಲಿಂಗಯ್ಯ ವೃತ್ತದಲ್ಲಿ ಸಂಜೆ ನಿಧನರಾದ ಸನ್ಮಾನ್ಯ ಆಟಲ್ ಬಿಹಾರಿ ವಾಜಪೇಯಿಯವರಿಗೆ ನಗರದ ಭಾರತೀಯ ಜನತಾ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನೆಡೆಸಲಾಯಿತು, ಪಕ್ಷದ ಯುವ ಮೋರ್ಚಾ ಕಾರ್ಯಕರ್ತರು ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಜನತಾ ಪಕ್ಷದ ಎಲ್ಲ ಪದಾಧಿಕಾರಿಗಳು ಹಾಜರಿದ್ದು ವಾಜಪೇಯಿಯವರಿಗೆ ಅಟಲ್ ಜಿ ರವರಿಗೆ ಗುಣಗಾನಮಾಡಿ, ಪುಷ್ಪ ಅರ್ಪಿಸಿ, ದೀಪ ಬೆಳಗಿಸಿ ಅಂತಿಮ ನಮನ ಸಲ್ಲಿಸಿದರು, ಹಿರಿಯ ಬಾಜಪ ಕಾರ್ಯಕರ್ತರು ವಾಜಪೇಯಿಯವರು ಎರಡು ಬಾರಿ ಚುನಾವಣಾ ಪ್ರಚಾರಕ್ಕೆ ಮತ್ತೊಂಮ್ಮೆ ನೇಕಾರರ ಸಮಸ್ಯೆ ಆಲಿಸಲು ಹೀಗೆ ಮೂರು ಬಾರಿ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ್ದನ್ನು ನೆನಪಿಸಿಕೊಂಡರು, ನಗರದ ಕಾಂಗ್ರೆಸ್ ಪಕ್ಷದ ವತಿಯಿಂದ ಅಗಲಿದ ಹಿರಿಯ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು, ತಾಲ್ಲೂಕಿನ ಕೊನಘಟ್ಟ ಗ್ರಾಮಸ್ತರು, ಮೊಬೈಲ್ ಮತ್ತು ಕರೆನ್ಸಿ ವ್ಯಾಪಾರಸ್ತರ ಸಂಘ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್, ಹಿರಿಯ ವಾಣಿಜ್ಯೋದ್ಯಮಿ ಹೆಚ್.ಪಿ. ಶಂಕರ್, ತಾಲ್ಲೂಕು ಫೋಟೋ ಮತ್ತು ವಿಡಿಯೋ ಛಾಯಾಗ್ರಹಕರ ಸಂಘ, ಸಂಸ್ಕೃತಿ ಟ್ರಸ್ಟ್ ಅಧ್ಯಕ್ಷ ನಾಗೇಶ್ ಮತ್ತು ದೊಡ್ಡಬಳ್ಳಾಪುರದ ಎಲ್ಲಾ ಸಂಘಟನೆಗಳು ಭಾರತದ ರಾಜಕೀಯ ಭೀಷ್ಮ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.
Comments