72ನೇ ವರ್ಷದ ಸಂಭ್ರಮದ ಸ್ವಾತಂತ್ರ್ಯೋತ್ಸವ ದಿನಾಚರಣೆ







ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ದೊಡ್ಡಬಳ್ಳಾಪುರ ವತಿಯಿಂದ ಇಂದು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಎಪ್ಪತ್ತ ಎರಡನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು, ಬೆಳಿಗ್ಗೆ ಒಂಬತ್ತು ಘಂಟೆಗೆ ಸರಿಯಾಗಿ ಧ್ವಜಾರೋಹಣವನ್ನು ಉಪ ವಿಭಾಗಾಧಿಕಾರಿಗಳಾದಂತ ಶ್ರೀ ಎನ್.ಮಹೇಶ್ ಬಾಬು ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಶ್ರೀ ಟಿ.ವೆಂಕಟರಮಣಯ್ಯ ಮಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ ಹೆಚ್.ವಿ.ಶ್ರೀವತ್ಸ,ಅಧ್ಯಕ್ಷರು ತಾ.ಪಂಚಾಯಿತಿ, ಶ್ರೀ ತ.ನ.ಪ್ರಭುದೇವ್, ಅಧ್ಯಕ್ಷರು. ನಗರಸಭೆ, ಶ್ರೀಮತಿ. ಮೀನಾಕ್ಷಿ ಕೆಂಪಣ್ಣ, ಉಪಾಧ್ಯಕ್ಷರು, ತಾ.ಪಂ. ಶ್ರೀಮತಿ ಜಯಲಕ್ಷ್ಮಿ ನಟರಾಜ್, ಉಪಾಧ್ಯಕ್ಷರು, ನಗರಸಭೆ ಭಾಗವಹಿಸಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದಂತ ಶ್ರೀ ಬಿ.ಎ.ಮೋಹನ್, ತಹಸೀಲ್ದಾರ್, ಸ್ವಾಗತ ಭಾಷಣ ಮಾಡಿ ಗಣ್ಯರ ಪರಿಚಯ ಮಾಡಿಕೊಟ್ಟರು. 2550ಕ್ಕೂ ಹೆಚ್ಚು ಮಂದಿ ತಾಲ್ಲೂಕಿನ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಸಭಾ ಕಾರ್ಯಕ್ರಮಕ್ಕೂ ಮುನ್ನ ಧ್ವಜಾರೋಹಣ ನೆರವೇರಿಸಿದ ಉಪ ವಿಭಾಗಾಧಿಕಾರಿ ಮಹೇಶ್ ಬಾಬು ಪೋಲೀಸ್, ಎನ್.ಸಿ.ಸಿ. ಸೇವಾದಳ ಮತ್ತು ಶಾಲಾ ಮಕ್ಕಳೂ ಸೇರಿದಂತೆ ಎಪ್ಪತ್ತೆರಡು ತಂಡಗಳ ಪೆರೇಡ್ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು.
ಸಭಾ ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 5 ಮಂದಿ ವಿದ್ಯಾರ್ಥಿನಿಯರಿಗೆ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು ಹಾಗೂ ಕ್ರೀಡೆ, ಜಾನಪದ, ವೈದ್ಯ, ಸಾಮಾಜಿಕ, ಕೃಷಿ, ಯೋಗ, ಸೈನಿಕರು,ಶಿಕ್ಷಣ, ಅಂಚೆ ಚೀಟಿ ಸಂಗ್ರಹ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಿ ಕೊಂಡಿರುವವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆರ್.ಮಂಜುನಾಥ್, ಪೌರಾಯುಕ್ತರು, ದ್ಯಾಮಪ್ಪ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ, ರಂಗಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ, ಮೋಹನ್ ಕುಮಾರ್ ಪೋಲೀಸ್ ಉಪಾಧೀಕ್ಷಕರು, ಎಲ್ಲಾ ನಗರಸಭಾ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾ ಮಹದೇವ್, ಹಿರಿಯ ನಾಗರೀಕರು ಶಿಕ್ಷಕರು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
Comments