ಸ್ವಾತಂತ್ರಯೋತ್ಸವದ ದಿನ ಕರ್ನಾಟಕ ಅಭಿವೃದ್ಧಿಯ ಕಾರ್ಯಸೂಚಿಯನ್ನು ಬಿಚ್ಚಿಟ್ಟ ಕುಮಾರಸ್ವಾಮಿ...!
ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸ್ವಾತಂತ್ರಯೋತ್ಸವದ ದಿನ ತೆರೆದಿಟ್ಟರು. ಮಾಣಿಕ್ ಶಾ ಪೆರೆಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಸರ್ಕಾರವು ರಾಜ್ಯದ ಅಭಿವೃದ್ದಿಗೆ ಬದ್ಧವಾಗಿದೆ ಎಂದ ಅವರು, ಸರ್ಕಾರ ಮಾಡಲಿಚ್ಛಿಸಿರುವ ಯೋಜನೆಗಳ ನೀಲಿ ನಕ್ಷೆಯನ್ನು ಜನರೊಂದಿಗೆ ಹಂಚಿಕೊಂಡರು. ಮಾಣಿಕ್ ಶಾ ಪೆರೆಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಸರ್ಕಾರವು ರಾಜ್ಯದ ಸರ್ವತೋಮುಖ ಅಭವೃದ್ಧಿಗೆ ಬದ್ಧವಾಗಿದೆ ಎಂದ ಅವರು, ಸರ್ಕಾರ ಮಾಡಲಿಚ್ಛಿಸಿರುವ ಯೋಜನೆಗಳ ನೀಲಿ ನಕ್ಷೆಯನ್ನು ಜನರೊಂದಿಗೆ ಹಂಚಿಕೊಂಡರು.
ಆರೋಗ್ಯ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಮೂಲಭೂತ ಅಭಿವೃದ್ಧಿ, ವ್ಯವಸಾಯ, ಅಲ್ಪಸಂಖ್ಯಾತ ಅಭಿವೃದ್ಧಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಎಲ್ಲಾ ಕ್ಷೇತ್ರಗಳಲ್ಲಿ ಸರ್ಕಾರ ಈಗಾಗಲೇ ಕೈಗೊಂಡಿರುವ ಯೋಜನೆಗಳು ಮತ್ತು ರೈತರ ಸಾಲಮನ್ನಾ ಮಾಡಿದ್ದೇವೆ, ಜೊತೆಗೆ ಇಸ್ರೇಲ್ ಮಾದರಿ ಕೃಷಿಯನ್ನು ಕರ್ನಾಟಕದಲ್ಲಿ ಪರಿಚಯಿಸಿ ರೈತರನ್ನು ಸ್ವಾಲಂಬಿಯನ್ನಾಗಿ ಮಾಡಲು ಪ್ರಯತ್ನಗಳು ಈಗಾಗಲೇ ಶುರುವಾಗಿದೆ ಎಂದು ಎಚ್ ಡಿ ಕುಮಾರಸ್ವಾಮಿ ಮಾಹಿತಿ ನೀಡಿದರು.
ಏರೋ ಇಂಡಿಯಾ ಪ್ರದರ್ಶನ ಸ್ಥಳಾಂತರಕ್ಕೆ ಸಾರ್ವಜನಿಕ ವಿರೋಧ ವ್ಯಕ್ತವಾಗಿದೆ. ಹಾಗಾಗಿ ನಾನು ಪ್ರಧಾನಿ ಮೋದಿ ಹಾಗು ರಕ್ಷಣಾ ಸಚಿವರಿಗೆ ಈ ಕುರಿತು ಪತ್ರ ಬರೆದಿದ್ದೇನೆ. ರಾಜ್ಯದ ಸಂಸದರ ಗಮನಕ್ಕೂ ವಿಷಯವನ್ನು ತಂದಿದ್ದೇನೆ, ಕೇಂದ್ರವು ಸಾರ್ವಜನಿಕ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
Comments