ಬ್ರೇಕಿಂಗ್ ನ್ಯೂಸ್ : ಸ್ವಾತಂತ್ರ್ಯ ದಿವಸಕ್ಕೆ ರಾಜ್ಯ ಸರಕಾರದಿಂದ ರೈತರಿಗೆ ಬಿಗ್ ಶಾಕ್!

ಅಂತೂ, ಇಂತೂ ದೋಸ್ತಿ ಸರಕಾರದ ರಾಜ್ಯದ ಸಹಕಾರಿ ಬ್ಯಾಂಕ್ ಗಳಲ್ಲಿ ರೈತರಿಗೆ ವಿತರಣೆ ಮಾಡಿದ್ದ ಅಲ್ಪಾವಧಿ ಬೆಳಸಾಲಮನ್ನಾವನ್ನು ಮಾಡಿ ರೈತರಿಗೆ ಸಹಾಯ ಮಾಡಿದ್ದೇವೆ ಅಂತ ಬೀಗುತ್ತಿದೆ.
ಈ ನಡುವೆ ಸಹಕಾರಿ ಬ್ಯಾಂಕ್ ಗಳಲ್ಲಿನ ಸಾಲಮನ್ನಾದ ಬಗ್ಗೆ ಕಳೆದ ಗುರುವಾರ ಸಚಿವ ಸಂಪುಟದಲ್ಲಿ ತೆಗದುಕೊಂಡ ಕ್ರಮಗಳ ಬಗ್ಗೆ ಮಂಗಳವಾರ ಸರಕಾರ ತನ್ನ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ. ಬೆಳೆ ಸಾಲ ಪಡೆದ ರೈತರು ಸರಕಾರಿ, ಸಹಕಾರಿ ಮತ್ತು ಇತರೆ ಕ್ಷೇತ್ರದ ನೌಕರರಾಗಿದ್ದು, ಪ್ರತಿ ತಿಂಗಳು 20ಸಾವಿರಕ್ಕಿಂತ ಹೆಚ್ಚಿನ ವೇತನ/ಪಿಂಚಣಿ ಪಡೆಯುತ್ತಿದ್ದಲ್ಲಿ ಆ ರೈತರಿಗೆ ಈ ಯೋಜನೆಯು ಅನ್ವಯವಾಗುವುದಿಲ್ಲ, ಸಾಲಮನ್ನಾ ಮಾಡುವ ಸಾಲವು ರೈತರು ಸಾಲ ಮರುಪಾವತಿಸುವ ಗಡುವು ದಿನಾಂಕಕ್ಕೆ ಜಾರಿಗೆ ಬರುತ್ತದೆ. 10-07-2018ಕ್ಕೆ ಇರುವ ಸಾಲದ ಹೊರ ಬಾಕಿಯಲ್ಲಿ ಒಂದು ರೈತ ಕುಟುಂಬಕ್ಕೆ ಗರಿಷ್ಟ 1 ಲಕ್ಷದ ತನಕ ಬಾಕಿ ಸಾಲಮನ್ನಾ ಮಾಡಲಾಗುತ್ತದೆ. ಇದಲ್ಲದೇ ಸಾಲಮನ್ನ ಯೋಜನೆಯಲ್ಲಿಗೆ ಆವಿರುವ 1 ಲಕ್ಷ ರೂ ಗಳ ಅಸಲೂ ಮತ್ತು ಸಂಪೂರ್‍ಣ ಚಾಲ್ತಿ ಸಾಲದ ಬಡ್ಡಿಯನ್ನು ಜಾರಿಯಲ್ಲಿರುವ ಬಡ್ಡಿ ಸಬ್ಸಡಿ ಯೋಜನೆಯಡಿಯಲ್ಲಿ ಭರಿಸಲಾಗುವುದು, ಇದಲ್ಲದೇ ಸುಸ್ತಿಯಾದ ಪ್ರಕರಣಗಳಿಲ್ಲಿ ಬಡ್ಡಿಯನ್ನು ರೈತರು ಭರಿಸಬೇಕು. ಚಾಲ್ತಿ ಸಾಲದ ಲಕ್ಷಕ್ಕಿಂತ ಹೆಚ್ಚಿನ ಅಸಲನ್ನು ಗಡುವಿನ ದಿನಾಂಕದೊಳಗೆ ಮತ್ತು ಸುಸ್ತಿ ಸಾಲದ ಮರು ಪಾವತಿ ದಿನಾಂಕದವರೆಗಿನ ಸಂಪೂರ್ಣ ಸಾಲದ ಬಡ್ಡಿಯನ್ನು ಹಾಗೂ ಲಕ್ಷಕ್ಕಿಂತ ಹೆಚ್ಚಿನ ಅಸಲನ್ನು 2019ರ ಮಾರ್ಚಿ 31ರೊಳಗೆ ಭರಿಸಬೇಕು. ಇದಲ್ಲದೇ ಈ ಹಿಂದೆ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸಾಲಮನ್ನಾ ಅನ್ವಯ ಎನ್ನುವ ಷರತ್ತಿಗೆ ವಿರೋಧ ಲೆಕ್ಕಿಸದೇ ಸಿಎಂ ಹೆಚ್ಚಿಕೆ ಮತ್ತದೇ ಹಳೇ ನಿಯಮಕ್ಕೆ ಜೋತು ಬಿದ್ದು ಹೊಸ ಅದೇಶದಲ್ಲೂ ಕೂಡ ರೈತರ ಪ್ರತಿ ಕುಟುಂಬದ 1 ಲಕ್ಷ ಮಾತ್ರ ಸಾಲಮನ್ನ ಅಂತ ಹೇಳಿದೆ.
Comments