11 ರಿಂದ 17 ವರ್ಷದ ಬಾಲಕರ ವಿಭಾಗದಲ್ಲಿ ಕೆ.ವಿನಯ್ ಕುಮಾರ್ ಛಾಂಪಿಯನ್
ಕುಪ್ಪಾನವಾಡಿ ಮುರುಘೇಂದ್ರ ವಸತಿ ಶಾಲೆ, ಚಿಕ್ಕೋಡಿ. ಇಲ್ಲಿ ಮೂರು ದಿನಗಳ ಕಾಲ ನಡೆದ 38 ನೇ ಕರ್ನಾಟಕ ರಾಜ್ಯ ಯೋಗ ಛಾಂಪಿಯನ್ ಶಿಪ್ ಮತ್ತು 7ನೇ ರಾಜ್ಯ ಶಾಲಾ ಕಾಲೇಜು ಯೋಗಾಸನ ಛಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರದ ಕೆ.ವಿನಯ್ ಕುಮಾರ್ 11 ರಿಂದ 17 ವರ್ಷದ ಬಾಲಕರ ವಿಭಾಗದಲ್ಲಿ ಛಾಂಪಿಯನ್ ಆಗಿ ಆಯ್ಕೆಯಾಗಿದ್ಡಾನೆ. 818 ಮಂದಿ ಈ ಛಾಂಪಿಯನ್ ಶಿಪ್ ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ನಿಸರ್ಗ ಯೋಗ ಕೇಂದ್ರ, ದೊಡ್ಡಬಳ್ಳಾಪುರದಿಂದ ಭಾಗವಹಿಸಿದ್ದ ಮಕ್ಕಳಲ್ಲಿ ಕೆ.ವಿನಯ್ ಕುಮಾರ್ ಮತ್ತು ಎಸ್.ಜ್ಯೇಷ್ಠ ಚಿನ್ನದ ಪದಕ ಪಡೆದರೆ, ಎ.ಗಾನಶ್ರೀ, ವಿ.ವರಪ್ರಸಾದ್ ಬೆಳ್ಳಿ ಪದಕ ಪಡೆದರು ಹಾಗೂ ಎಂ.ಆರ್. ಜಾನ್ಹವಿ, ಎಲ್.ಎ.ಪುನೀತ ಮತ್ತು ಪಿ.ವಿ. ವರ್ಷಿಣಿ ಕಂಚಿನ ಪದಕ ಪಡೆದುಕೊಂಡರೆ ಕೆ.ಎಲ್. ಮೋನಿಕ ಮತ್ತು ಎಂ.ಸಾಗರ್ ಗೌಡ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಎಲ್ಲ ಮಕ್ಕಳು ಪಂಜಾಬಿನಲ್ಲಿ ನಡೆಯುವ ರಾಷ್ಟ್ರೀಯ ಯೋಗ ಛಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಟ್ರೋಫಿ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ನಿಸರ್ಗ ಯೋಗ ಕೇಂದ್ರದ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು, ಇವರ ಜೊತೆಯಲ್ಲಿ ಅಧ್ಯಕ್ಷ ಎಂ.ಜಿ.ಅಮರನಾಥ್, ಕಾರ್ಯದರ್ಶಿ ಯೋಗ ನಟರಾಜ್, ಶ್ಯಾಮಸುಂದರ, ರಾಜು, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ವೀಣಾ, ಶ್ರೀಮತಿ ಗೀತ ಮತ್ತಿತರರು ಮಕ್ಕಳ ಜೊತೆಯಲ್ಲಿ ಭಾಗವಹಿಸಿದ್ದರು.
Comments