ಗಳಿಸಿದ್ದರಲ್ಲಿ ಒಂದಷ್ಟನ್ನು ಧಾನ ಮಾಡಬೇಕು: ವಾಸವಿ ಸ್ನೇಹ ಕೂಟದ ಅಧ್ಯಕ್ಷ ಸಿ.ಎಸ್ ಮಂಜುನಾಥ್
ಕೊರಟಗೆರೆ ಆ.13:- ಸಮಾಜದಿಂದ ಕೇವಲ ಪಡೆಯುವುದನ್ನಷ್ಟೇ ಕಲಿಯದೆ ಸಮಾಜಕ್ಕೆ ನೀಡುವುದನ್ನು ಕಲಿಯಬೇಕು ಎಂದು ಬೆಂಗಳೂರಿನ ವಿಜಯಜನಗರದ ವಾಸವಿ ಸ್ನೇಹ ಕೂಟ ಸಂಘದ ಅಧ್ಯಕ್ಷ ಸಿ.ಎನ್ ಮಂಜುನಾಥ್ ತಿಳಿಸಿದರು.
ಪಟ್ಟಣ ದ ಕನ್ನಿಕಾ ಮಹಲ್ನಲ್ಲಿ ವಾಸವಿ ಸ್ನೇಹ ಕೂಟ ಸಂಘದ ವತಿಯಿಂದ ಕನ್ನಿಕಾ ವಿದ್ಯಾಪೀಠಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ತಮ್ಮ ವೃತ್ತಿಯಲ್ಲಿ ಹಣ ಗಳಿಸುತ್ತಾರೆ ಎಲ್ಲವನ್ನೂ ಖರ್ಚು ಮಾಡಲಾಗುವುದಿಲ್ಲ.. ಅದೇ ರೀತಿ ಉಳಿಸಿದ ಹಣವನ್ನೇಲ್ಲಾ ಬಚ್ಚಿಡುವ ಬದಲು ಸಮಾಜ ಮುಖಿ ಕೆಲಸಕ್ಕೆ ಬಳಸಬೇಕು ಎಂದು ಸೂಚಿಸಿದರು.
ಸ್ನೇಹ ಕೂಟ ಎನ್ನುವುದು ನಮ್ಮೆಲ್ಲಾ ಸ್ನೇಹಿತರ ಚಿಂತನೆಯಿಂದ ಪ್ರಾರಂಭವಾಗಿದ್ದು ಇಲ್ಲಿ ಸಮಾಜ ಮುಖಿ ಕೆಲಸಗಳನ್ನು ಮಾಡುವುದೇ ನಮ್ಮ ಧ್ಯೇಯ ನಮ್ಮ ಸ್ನೇಹಿತರ 72 ಕುಟುಂಬದ ಸದಸ್ಯರು ತಮ್ಮ ಗಳಿಕೆಯ ಹಣದಲ್ಲಿ ಇಂತಿಷ್ಟು ಹಣವನ್ನು ನಮಗೆ ನೀಡಿ ಈ ಸಮಾಜಮುಖಿ ಕೆಲಸಕ್ಕೆ ಕೈ ಜೋಡಿಸುತ್ತಿದ್ದಾರೆ ಎಂದು ವಾಸವಿ ಸ್ನೇಹ ಕೂಟದ ಉಪಾಧ್ಯಕ್ಷ ಸಿ.ಎಂ ರಮೇಶ್ ತಿಳಿಸಿದರು.
ವಾಸವಿ ಸ್ನೇಹ ಕೂಟ ಸಂಘದ ನಿರ್ದೇಶಕ ಕಿಶೋರ್ ಮಾಕಮ್ ಮಾತನಾಡಿ ಪ್ರತಿಯೊಂದು ಹಂತದಲ್ಲೂ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ಅತ್ಯಾವಶ್ಯಕವಾಗಿದ್ದು ಮಕ್ಕಳಿಗೆ ಮನೆಯಲ್ಲಿ ಪೋಷಕರು... ಶಾಲೆಯಲ್ಲಿ ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
1 ನೇ ತರಗತಿಯಿಂದ 7 ನೇ ತರಗತಿಯ 360 ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಿಕಾ ವಿದ್ಯಾಪೀಠ ಶಾಲೆಯ ಅಧ್ಯಕ್ಷ ಎಂ.ಜಿ ಸುಧೀರ್, ಉಪಾಧ್ಯಕ್ಷ ನಂಜುಂಡಶೆಟ್ಟಿ, ಕಾರ್ಯದರ್ಶಿ ಕೆ.ಎಸ್.ವಿ ರಘು, ಮುಖ್ಯ ಶಿಕ್ಷಕ ರಾಘವೇಂದ್ರ ಡಿ.ಎಂ ಮಾತನಾಡಿದರು. ವೇಧಿಕೆಯಲ್ಲಿ ನಿರ್ದೇಶಕ ಶ್ರೀನಿವಾಸ್ ಮೂರ್ತಿ,ಪ್ರಶಾಂತ್, ಶಿಕ್ಷಕಿಯರಾದ ಬೀಬಿ ಅಯಿಶಾ,ಅಶ್ವಿನಿ, ರಮಾಮಣಿ, ಎಂ.ಆರ್ ದಿವ್ಯ, ಸುಜಾತಾ ಸೇರಿದಂತೆ ಇತರರು ಇದ್ದರು. (ಚಿತ್ರಗಳು ಇವೆ)
Comments