ಲೋಕಸಭಾ ಚುನಾವಣೆಯ ಸ್ಪರ್ಧೆ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ಪ್ರಜ್ವಲ್ ರೇವಣ್ಣ
ಹಾಸನದಿಂದ ತಮ್ಮನ್ನು ಅಭ್ಯರ್ಥಿ ಮಾಡಬಯಸಿರುವ ಮಾಜಿ ಪ್ರಧಾನಿ ದೇವೇಗೌಡರ ತೀರ್ಮಾನದಿಂದ ಸಂತೋಷವಾಗಿದೆ. ಅವರ ಆಜ್ಞೆ ಪಾಲಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ದೇವೇಗೌಡರ ಕುಟುಂಬ ಹಮ್ಮಿಕೊಂಡಿರುವ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹರದನಹಳ್ಳಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ದೇವೇಗೌಡರ ನಿರ್ಧಾರ ಸಂತೋಷದ ವಿಚಾರ. ಅವರ ಆಜ್ಞೆಯನ್ನು ಪಾಲಿಸುತ್ತೇನೆ. ರಾಜ್ಯದಲ್ಲಿ ಎಲ್ಲೇ ನಿಲ್ಲಿಸಿದರೂ ಸ್ಪರ್ಧೆ ಮಾಡುತ್ತೇನೆ, ರಾಜ್ಯದ ಜನರ ಅಪೇಕ್ಷೆಯಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
Comments