ಬಿಗ್ ಬ್ರೇಕಿಂಗ್ : ಬಿಜೆಪಿಯ ಈ 30 ಶಾಸಕರು ಜೆಡಿಎಸ್‍ಗೆ....ಸಚಿವ ಎಚ್.ಡಿ.ರೇವಣ್ಣ ನವರ ಹೊಸ ಬಾಂಬ್..!!

ಬಿಜೆಪಿಯ 30 ಜನ ಶಾಸಕರು ಜೆಡಿಎಸ್‍ಗೆ ಬರಲು ಸಿದ್ಧರಾಗಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ನೋವಾಗುವ ಕೆಲಸ ಮಾಡಬಾರದು ಎಂದು ನಾವೇ ಅವರನ್ನು ಪಕ್ಷಕ್ಕೆ ಬರುವುದು ಬೇಡ ಎಂದು ಹೇಳುತ್ತಿದ್ದೇವೆ. ಯಡಿಯೂರಪ್ಪನವರ ಆರೋಗ್ಯ ಸರಿಯಿಲ್ಲ. ನೀವು ಅಲ್ಲೇ ಇರಿ ಎಂದು ಬಿಜೆಪಿ ಶಾಸಕರಿಗೆ ಹೇಳಿದ್ದೇವೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಯಡಿಯೂರಪ್ಪರಿಗೆ ಒಳ್ಳೆಯ ಗಿಫ್ಟ್ ಕೊಡುತ್ತೇವೆ. ಕಾಯುತ್ತೀರಿ ಎಂದು ರೇವಣ್ಣ ಹೊಸ ಬಾಂಬ್ ಸಿಡಿಸಿದರು. ಕಾಂಗ್ರೆಸ್ ನವರು ಎ ಟೀಮ್, ಬಿ ಟೀಮ್ ಎನ್ನದಿದ್ದರೆ ಬಿಜೆಪಿಗೆ ಇನ್ನೂ 30 ಸೀಟು ಕಡಿಮೆ ಬರುತ್ತಿತ್ತು. ಬೆಳಗಾವಿಯಲ್ಲಿ ಎಲ್ಲಾ ಕೆಲಸ ಮುಗಿದಿದೆ. ಅಲ್ಲಿ ಯಾವುದೇ ಕೆಲಸವಿಲ್ಲ. ಹಾಗಾಗಿ ಕೆ-ಶಿಪ್ ಕಚೇರಿಯನ್ನು ಹಾಸನದ ಸಕಲೇಶಪುರಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು. ಕೆ-ಶಿಪ್‍ನಲ್ಲಿ ವಲ್ರ್ಡ್ ಬ್ಯಾಂಕ್‍ನಿಂದ 30 ಸಾವಿರ ಕೋಟಿ ಕೆಲಸ ನಡೆಯುತ್ತಿದೆ. ವಲ್ರ್ಡ್ ಬ್ಯಾಂಕ್ ಅಧಿಕಾರಿಗಳು ಕಚೇರಿ ಸ್ಥಳಾಂತರಿಸಲು ಆರು ತಿಂಗಳ ಹಿಂದೆಯೇ ಪತ್ರ ಬರೆದಿದ್ದರು. ಅದರಂತೆ ಸ್ಥಳಾಂತರಿಸಲಾಗಿದೆ. ಹಾಸನದ ಈಗಿನ ಕೆ-ಶಿಪ್ ಕಚೇರಿಗೆ 675 ಕೋಟಿ ಕೆಲಸ ನಡೆಯುತ್ತಿದೆ. ನಾನು ಮಂತ್ರಿಯಾಗುವ ಮೊದಲೇ ದೇವೇಗೌಡರು ಹಲವು ರಸ್ತೆ ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದಾರೆ. ಬೆಳಗಾವಿ ಹಣ ತಂದು ನಾನು ಹಾಸನಕ್ಕೆ ಹಾಕಿಲ್ಲ. ಮಾಡಲು ಕೆಲಸವಿಲ್ಲದ ಬಿಜೆಪಿಯವರು ಅನಗತ್ಯ ಆರೋಪ ಮಾಡುತ್ತಾರೆ ಎಂದು ರೇವಣ್ಣ ಹೇಳಿದರು.
Comments