ಆಗಸ್ಟ್ 14ರ ಮಂಗಳವಾರ ಮದ್ಯರಾತ್ರಿ 12 ಘಂಟೆಗೆ ಅಖಂಡ ಭಾರತ ಸಂಕಲ್ಪ ದಿನಾಚರಣೆ
ದೊಡ್ದಬಳ್ಳಾಪುರ ನಗರದ ಹಿಂದೂ ಜಾಗರಣ ವೇದಿಕೆ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ದಿನಾಂಕ 14-08-2018 ರ ಮಂಗಳವಾರ ರಾತ್ರಿ 12 ಘಂಟೆಗೆ ಅಖಿಲ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ, ಭಾರತದ ಏಕತೆ, ಅಖಂಡತೆ ಹಾಗೂ ಸಮಗ್ರತೆಯನ್ನು ಸಂರಕ್ಷಿಸುವ ಸಶಕ್ತ ಹಿಂದೂ ಸಮಾಜವನ್ನು ಹುಟ್ಟು ಹಾಕಲು, ದೇಶದ ನಾಶಕ್ಕೆ ಸಂಚು ರೂಪಿಸುವ ರಾಷ್ಟ್ರವಿರೋಧಿ ಶಕ್ತಿಗಳ ಸಂಚನ್ನು ಸದೆಬಡಿಯುವ ಸಂಘಟಿತ ಯುವಶಕ್ತಿಯನ್ನು ಸಜ್ಜುಗೊಳಿಸುವ ಸಲುವಾಗಿ, ಸ್ವಾತಂತ್ರ್ಯ ಸಂಗ್ರಾಮ ವೀರಗಾಥೆಯನ್ನು ನೆನಪಿಸಿ, ಹುತಾತ್ಮ ದೇಶಭಕ್ತ ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಿಸಿ, ಭಾರತದ ಸುರಕ್ಷತೆಗಾಗಿ ದುಡಿಯುವ ಸಂಕಲ್ಪವನ್ನು ತೊಡಲು 14 ರ ಮಂಗಳವಾರ ಮದ್ಯರಾತ್ರಿ 12 ಘಂಟೆಗೆ ಸರಿಯಾಗಿ ಮುತ್ಯಾಲಮ್ಮ ದೇವಸ್ಥಾನದ ಹತ್ತಿರ ಧ್ವಜಾರೋಹಣವನ್ನು ನೆರವೇರಿಸಲಾಗುತ್ತದೆ, ನಗರದ ಎಲ್ಲಾ ಭಾಗಗಳಿಂದ ಬರುವ ದೇಶ ಭಕ್ತರು ಒಂದೆಡೆ ಸೇರಿ ಮೆರವಣಿಗೆಯ ಮೂಲಕ ಅರ್ಧ ಘಂಟೆ ಮೊದಲು ಹಾಜರಾಗಲು ಕೋರಲಾಗಿದೆ. ಮುಖ್ಯ ಭಾಷಣಕಾರರಾಗಿ ರವೀಶ್ ತಂತ್ರಿ, ಕುಂಟಾರು. ಆಗಮಿಸಲಿದ್ದಾರೆ.
Comments