ವೀಕೆಂಡ್ ನಲ್ಲಿ ಸಿಎಂ ಎಚ್'ಡಿಕೆ ಏನ್ ಮಾಡ್ತಾರೆ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ..!!
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತ ಪರ ನಾಯಕ ಎಂದು ಗುರುತಿಸಿಕೊಂಡವರು. ಮಾಜಿ ಪ್ರಧಾನಿ ದೇವೇಗೌಡರ ಗರಡಿಯಲ್ಲಿ ರಾಜಕೀಯದ ವ್ಯಾಕರಣವನ್ನು ಕಲಿತ ಕುಮಾರಸ್ವಾಮಿ ಅವರು, ಬೇರೆ ರಾಜಕೀಯ ನಾಯಕರಿಗಿಂತಲೂ ಕೊಂಚ ಭಿನ್ನ ಎನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಯಾವಾಗಲೂ ಕ್ಲೀನ್ ಶೇವ್, ಪ್ಲೇನ್ ಶರ್ಟ್, ಫಾರ್ಮುಲ್ ಪ್ಯಾಂಟ್ ಹಾಗೂ ಹೆಗಲ ಮೇಲೆ ಒಂದು ವಸ್ತ್ರ ಹೊದ್ದುಕೊಂಡಿರುವ ಕುಮಾರಸ್ವಾಮಿ ಅವರನ್ನು ನಾವು ನೀವೆಲ್ಲಾ ನೋಡಿದ್ದೇವೆ. ಆದ್ರೆ, ಸಿಎಂ ಈ ವೀಕೆಂಡ್ ನಲ್ಲಿ ತಲೆಗೆ ಟವೆಲ್ ಕಟ್ಟಿಕೊಂಡು ಲುಂಗಿಯೊಂದಿಗೆ ಗದ್ದೆಗೆ ಇಳಿಯಲಿದ್ದಾರೆ. ರೈತರ ಮೇಲೆ ತಮಗಿರುವ ಕಾಳಜಿಯನ್ನು ತೋರಿಸಲು, ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಆಗಸ್ಟ್ 11 ರಂದು ಗದ್ದೆಗೆ ಇಳಿಯಲಿದ್ದಾರೆ. ಹೌದು, ಮಂಡ್ಯ ಜಿಲ್ಲೆಯ ಸೀತಾಪುರದಲ್ಲಿ ಸಿಎಂ ಗದ್ದೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ನಾಟಿ ಕಾರ್ಯ ಮಾಡಲಿದ್ದಾರೆ. ಬರುವ ಶನಿವಾರದಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಗದ್ದೆಯಲ್ಲಿ ಬೆವರು ಹರಿಸಲಿದ್ದಾರೆ ಎಂದು ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದ್ದಾರೆ.
Comments