ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ..!!

ಇದೇ ತಿಂಗಳು 29 ರಂದು ನಡೆಯಲಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಜಿಲ್ಲಾ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದೆ. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಉಡುಪಿ ನಗರಸಭೆಗೆ 8 ಹಾಗೂ ಕಾರ್ಕಳ ಪುರಸಭೆಗೆ ಐವರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಇಲ್ಲಿದೆ ನೋಡಿ ನಗರಸಭೆ 8 ವಾರ್ಡ್ ಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ..!!
ಮೂಡಬೆಟ್ಟು ವಾರ್ಡ್: ರಮೇಶ್ ಶೆಟ್ಟಿ ಮೂಡಬೆಟ್ಟು, ಶಿರಿಬೀಡು: ಕೆ.ರಮೇಶ್ ಶೆಟ್ಟಿ ಆಶ್ರಯದಾತ, ಕರಂಬಳ್ಳಿ: ರೋಹಿತ್ ಕರಂಬಳ್ಳಿ, ಅಜ್ಜರಕಾಡು: ಅನಿತಾ ಶೆಟ್ಟಿ, ಕಸ್ತೂರ್ಬಾ ನಗರ: ಚಂದ್ರಕಲಾ ಚಿಟ್ಪಾಡಿ, ಇಂದಿರಾನಗರ: ಜಯಕರ ಪೂಜಾರಿ, ವಡಬಾಂಡೇಶ್ವರ: ಶಶಿಧರ ಎಂ ಅಮೀನ್, ಗುಂಡಿಬೈಲ್: ಆರೀಫ್ ಗುಂಡಿಬೈಲು, ಕಾರ್ಕಳ ಪುರಸಭೆ: ಬಂಗ್ಲೆಗುಡ್ಡೆ, ಕಜೆ: ನಸೀರ್ ಹುಸೆನ್, ಸಾಲ್ಮರ ಜರಿಗುಡ್ಡೆ: ಉಮೇಶ್ ಕಲ್ಲೂಟ್ಟೆ, ದಾನಶಾಲೆ: ಕೆ.ಪಿ. ಶಿವಾನಂದ, ತಾಲೂಕು ಕಚೇರಿ: ಮೊಹಮ್ಮದ್ ಜುಬೇರ್, ಕಾಬೆಟ್ಟು ರೋಟರಿ: ಸಚ್ಚಿನ್ ದೇವಾಡಿಗ.
ಅಭ್ಯರ್ಥಿಗಳು ಈಗಾಗಲೇ ಒಂದು ಸುತ್ತಿನ ಪ್ರಚಾರವನ್ನು ತಮ್ಮ ತಮ್ಮ ವಾರ್ಡ್ ಗಳಲ್ಲಿ ನಡೆಸಿದ್ದು, ಉಳಿದ ಅಭ್ಯರ್ಥಿಗಳಿಗೂ ವಾರ್ಡ್ ಗಳಿಗೆ ತೆರಳಿ ಜನರ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ. ಎಲ್ಲರಿಗೂ ನಿಷ್ಠೆಯಿಂದ ಜನರ ಸೇವೆ ಮಾಡುವಂತೆ ಸೂಚಿಸಲಾಗಿದೆ. ಜನರಿಗೆ ಹೊರೆಯಾಗಿರುವ ತೆರಿಗೆಯನ್ನು ಇಳಿಸಿ, ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಹಾಗೂ ಉಚಿತವಾಗಿ ನಡೆಸಲು ನಮ್ಮ ಪಕ್ಷ ಬದ್ಧವಾಗಿದೆ ಎಂದು ಯೋಗೀಶ್ ಶೆಟ್ಟಿ ಹೇಳಿದರು.
Comments