ಅಸಹಾಯಕ ಮುಖ್ಯಮಂತ್ರಿ ಎಂದ ಬಿ.ಎಸ್.ವೈ ಗೆ ಖಡಕ್ ತಿರುಗೇಟು ಕೊಟ್ಟ ಸಿಎಂ ಎಚ್'ಡಿಕೆ

ಎಚ್.ಡಿ.ಕುಮಾರಸ್ವಾಮಿ ಒಬ್ಬ ಅಸಹಾಯಕ ಮುಖ್ಯಮಂತ್ರಿ ಎಂದು ಟೀಕಿಸಿದ್ದ ಬಿ.ಎಸ್.ಯಡಿಯೂರಪ್ಪನವರ ಹೇಳಿಕೆಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ಇಂತಹ ಅಪ್ರಬುದ್ಧ ಹೇಳಿಕೆ ನೀಡುವ ಮೊದಲು ನಿಮ್ಮ ಅಧಿಕಾರಾವಧಿ ದಿನಗಳನ್ನು ನೆನಪಿಸಿಕೊಳ್ಳಿ ಎಂದು ಖಡಕ್ ತಿರುಗೇಟು ನೀಡಿದ್ದಾರೆ.
ನಿಮ್ಮ ಅಧಿಕಾರಾವಧಿಯ ದಿನಗಳನ್ನು ನೆನಪು ಮಾಡಿಕೊಳ್ಳಿ. ಮುಖ್ಯಮಂತ್ರಿಯಾಗಿದ್ದುಕೊಂಡು ನಿಮ್ಮ ಪರವಾಗಿ ಕಡತಗಳಿಗೆ ಸಹಿ ಹಾಕಲು ಮತ್ತು ನಿರ್ಧಾರ ಕೈಗೊಳ್ಳಲು ಅವಕಾಶ ಕೊಟ್ಟಿದ್ದು ನೆನಪಿಲ್ಲವೇ? ಅಂತಹ ಅವಕಾಶವನ್ನು ನಾನು ಯಾರಿಗೂ ಕೊಟ್ಟಿಲ್ಲ ಎಂದು ಟ್ವೀಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನನ್ನ ಮಾರ್ಗದರ್ಶಕರು, ಅವರ ಮಾರ್ಗದರ್ಶನ ಬಯಸುತ್ತೇನೆ ಮತ್ತು ಅನುಭವಕ್ಕೆ ಗೌರವ ಕೊಡುತ್ತೇನೆ. ಎಚ್.ಡಿ.ರೇವಣ್ಣ ಲೋಕಪಯೋಗಿ ಸಚಿವ ಹಾಗೂ ಸಹೋದ್ಯೋಗಿಯಾಗಿದ್ದು, ಅವರು ತಮ್ಮ ಕೆಲಸ ಮಾಡುತ್ತಾರೆ ಎಂದಿದ್ದಾರೆ.
Comments