ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ದೊಡ್ಡಬಳ್ಳಾಪುರ ಘಟಕದ ವತಿಯಿಂದ ರಾಷ್ಟ್ರೀಯ ನೇಕಾರರ ದಿನಾಚರಣೆ







ಭಾರತ ಸರ್ಕಾರದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನೇಕಾರರನ್ನು ಗುರುತಿಸಿ ಆಗಸ್ಟ್ ಏಳನ್ನು ರಾಷ್ಟ್ರೀಯ ನೇಕಾರರ ದಿನಾಚರಣೆಯನ್ನಾಗಿ ಘೋಷಿಸಿದ್ದಾರೆ, ಅದರ ಅಂಗವಾಗಿ ದಿನಾಂಕ : 07-08-2018 ರ ಇಂದು ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ದೊಡ್ಡಬಳ್ಳಾಪುರ ಘಟಕದ ವತಿಯಿಂದ ಸಂಘದ ಕಛೇರಿಯಲ್ಲಿ ಪಾಲನೇತ್ರೋದ್ಭವ ದೇವಲ ಮಹರ್ಷಿ ಮತ್ತು ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರಿಗೆ ಪೂಜೆ ಸಲ್ಲಿಸುವ ಮೂಲಕ ರಾಷ್ಟ್ರೀಯ ನೇಕಾರರ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ರವಿಕಿರಣ್ ಆಗಮಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಎಚ್.ವಿ. ಕೃಷ್ಣಕುಮಾರ್ ಅವರು ವಹಿಸಿದ್ದರು, ನೇಕಾರರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಸಿಹಿ ಹಂಚಲಾಯಿತು. ಅಧ್ಯಕ್ಷರಾದ ಎಚ್.ವಿ. ಕೃಷ್ಣಕುಮಾರ್ ಮಾತನಾಡಿ ಕೇಂದ್ರ ಸರ್ಕಾರದವರು ನೇಕಾರರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸಲು ಆಗಸ್ಟ್ ಏಳನ್ನು ನೇಕಾರರ ದಿನ ಎಂದು ಗುರುತಿಸಿದ್ದಾರೆ ಅದಕ್ಕಾಗಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಸಮಸ್ತ ನೇಕಾರ ಕುಲ ಬಾಂಧವರ ಪರವಾಗಿ ಹೃದಯಪೂರ್ವಕ ಅಭಿನಂದನೆ ತಿಳಿಸಿದರು.
ಉಪಾಧ್ಯಕ್ಷರಾದ ಶ್ರೀ ನಾಗರಾಜ್, ಕಾರ್ಯದರ್ಶಿ ಬಿ.ಸಿ. ಲಕ್ಷ್ಮೀನಾರಾಯಣ್, ಸಹಕಾರ್ಯದರ್ಶಿ ಸುಧಾಕರ್, ಕಾರ್ಯಾಧ್ಯಕ್ಷರಾದ ಕುಮಾರ್, ಬಿಸಿ ಲಕ್ಷ್ಮೀಕಾಂತ್ .ಎಸ್ ಎನ್ ಮೋಹನ್, ಶಂಕರ್ .ಯಶವಂತ್, ಭಾಸ್ಕರ್, ಎಲ್ ಎಸ್ ವಿಶ್ವನಾಥ್ ,ಬಾಲಕೃಷ್ಣ ,ಚಂದ್ರಶೇಖರ್, ಗಿರೀಶ್ ,ಮತ್ತು ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷರಾದ ರಾಜೇಶ್ವರಿ, ಕಾರ್ಯದರ್ಶಿ ವತ್ಸಲಾ, ಗಾಯಿತ್ರಿ, ಶೋಭಾ, ಗೌರಿ, ಮಹೇಶ್ವರಿ, ಮಣಿ ,ಶಶಿಕಲಾ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಎಚ್ ಎಸ್ ಕುಮಾರಸ್ವಾಮಿ, ಕರ್ನಾಟಕ ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಚೌಡರಾಜ್, ದೇವಾಂಗ ಶ್ರೀ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ, ನೇಕಾರ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ
Comments