ಬಿಗ್ ಬ್ರೇಕಿಂಗ್ : ಒಕ್ಕಲಿಗರ ಸಂಘದ ಚುನಾವಣೆ ಕುರಿತು ಎಚ್'ಡಿಡಿ-ಡಿಕೆಶಿಯ ಮಹತ್ವ ದ ನಿರ್ಧಾರ..!

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿದ್ದ ಬೆಟ್ಟೇಗೌಡ ಅವರನ್ನು ಕಳೆದ ವಾರದ ಪದಚ್ಯುತಿಗೊಳಿಸಲಾಗಿತ್ತು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಆದ್ದರಿಂದ, ಆಗಸ್ಟ್ 10ರಂದು ನಡೆಯಬೇಕಿದ್ದ ಸಂಘದ ಚುನಾವಣೆ ರದ್ದುಗೊಳಿಸಲಾಗಿದೆ.
ನಿಕಟಪೂರ್ವ ಅಧ್ಯಕ್ಷ ಡಾ.ಅಪ್ಪಾಜಿ ಗೌಡ ಮಾತನಾಡಿ ಎಚ್'ಡಿಡಿ ಮತ್ತು ಡಿಕೆಶಿ ಚುನಾವಣೆ ಬೇಡ. ನಾವೇ ಅಧ್ಯಕ್ಷರನ್ನು ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಎಚ್'ಡಿಡಿ ಮತ್ತು ಡಿಕೆಶಿ ಯವರ ಮಾತಿನಂತೆ ಅಧ್ಯಕ್ಷರ ಘೋಷಣೆಯಾಗಲಿದೆ. ಎಚ್.ಡಿ.ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ಅವರು ಸಭೆ ನಡೆಸಿ ಅಧ್ಯಕ್ಷರನ್ನು ಘೋಷಣೆ ಮಾಡಲಿದ್ದಾರೆ. ಇದನ್ನು ನಾವು ಕೂಡಾ ಒಪ್ಪಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
Comments