ಹತ್ತು ಸಾವಿರಕ್ಕೂ ಹೆಚ್ಚು ಜನರಿಂದ ನಂದಿ ಗಿರಿ ಪ್ರದಕ್ಷಿಣೆ,







ಇಂದು ಆಷಾಡ ಮಾಸದ ಕಡೆ ಸೋಮವಾರ ಎಂಬತ್ತನೇ ವರ್ಷದ ನಂದಿ ಗಿರಿ ಪ್ರದಕ್ಷಿಣೆಯು ಯಶಸ್ವಿಯಾಗಿ ನಡೆಯಿತು, ಬೆಳಿಗ್ಗೆ ಆರು ಘಂಟೆಯಿಂದಲೇ ಹೊರ ಊರುಗಳಿಂದ ಬಂದಿದ್ದ ಸಾವಿರಾರು ಭಕ್ತರು ಭೋಗ ನಂಧೀಶ್ವರನ ದರ್ಶನ ಮಾಡಿ ಗಿರಿ ಸುತ್ತಲು ಪ್ರಾರಂಭಿಸಿದರು. ನಂದಿ ಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಕೈವಾರ, ಚಿಂತಾಮಣಿ, ದೇವನಹಳ್ಳಿ, ಯಲಹಂಕದಿಂದ ಸಾವಿರಾರು ಭಕ್ತರು ಆಗಮಿಸಿದ್ದರು, ನಂದಿ ಗ್ರಾಮದ ಸುತ್ತಲಿನ ಹಳ್ಳಿಗಳಿಂದ ಆಗಮಿಸಿದ್ದ ಭಜನಾ ಮಂಡಲಿಯವರು, ದೊಡ್ಡಬಳ್ಳಾಪುರದ ಭಜನಾ ಮಂಡಲಿಯವರು ದಾರಿಯುದ್ದಕ್ಕೂ ದೇವರ ನಾಮ ಹಾಡುತ್ತಾ ಭಕ್ತಿಭಾವ ಮೆರೆದರು, ನಂದಿ ಗ್ರಾಮದಿಂದ ಪ್ರದಕ್ಷಿಣೆ ಹೊರಟ ಭಕ್ತರಿಗೆ ಸೇವಾ ಟ್ರಸ್ಟ್ ದಾರಿ ಮದ್ಯದ ಕಣಿವೇಪುರದಲ್ಲಿ ಬೆಳಗಿನ ತಿಂಡಿ ವ್ಯವಸ್ಥೆ ಮಾಡಿದ್ದರು, ದಾರಿಯಲ್ಲಿ ಚಿಕ್ಕಬಳ್ಳಾಪುರದ ಭಕ್ತರು ಕಡಲೆ ಉಸಲಿ, ದೊಡ್ಡಬಳ್ಳಾಪುರ ದೇವರಾಜನಗರದ ಭಕ್ತರು ಬಿಸ್ಕತ್, ಖರ್ಜೂರ, ಕಲ್ಲು ಸಕ್ಕರೆ ವಿತರಿಸಿದರು. ಹೆಗ್ಗಡ ಹಳ್ಳಿಯ ಹಾಲಿನ ಡೈರಿವತಿಯಿಂದ ಮಜ್ಜಿಗೆ ವಿತರಣೆ ಮಾಡಲಾಯಿತು. ಪ್ರದಕ್ಷಿಣೆ ಮುಗಿಸಿ ಬಂದ ಭಕ್ತರಿಗೆ ದಾನಿಗಳ ನೆರವಿನಿಂದ ಸೇವಾ ಟ್ರಸ್ಟ್ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
Comments