ಬ್ರೇಕಿಂಗ್ ನ್ಯೂಸ್ : ಜೆಡಿಎಸ್ ನೂತನ ಕಾರ್ಯಾಧ್ಯಕ್ಷ ಸ್ಥಾನ ಇವರಿಗೆ ಒಲಿಯಲಿದೆ..!
ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ನೇಮಕ ಮಾಡಿದ್ದು, ಇದೀಗ ಪಕ್ಷವು ಕಾರ್ಯಾಧ್ಯಕ್ಷ ಹುದ್ದೆ ನೇಮಕ ಮಾಡಲು ನಿರ್ಧರಿಸಿದ್ದು, ಈ ಸ್ಥಾನಕ್ಕೆ ಮಾಜಿ ಶಾಸಕರಾದ ಮಧು ಬಂಗಾರಪ್ಪ, ಸುರೇಶ್ ಬಾಬು ಮತ್ತು ವೈಎಸ್ ವಿ ದತ್ತಾ ರೇಸ್ ನಲ್ಲಿದ್ದಾರೆ.
ನಿನ್ನೆ ಹೆಚ್. ವಿಶ್ವನಾಥ್ ರನ್ನು ಜೆಡಿಎಸ್ ರಾಜ್ಯಾಧ್ಯಕ್ಷರ ಹುದ್ದೆಗೆ ನೇಮಕ ಮಾಡಲಾಗಿದೆ. ಸದ್ಯ ಕಾರ್ಯಾಧ್ಯಕ್ಷರ ಹುದ್ದೆ ಇನ್ನೂ ಖಾಲಿಯಾಗಿದ್ದು, ಮಧು ಬಂಗಾರಪ್ಪ, ಸುರೇಶ್ ಬಾಬು ಮತ್ತು ವೈಎಸ್ ವಿ ದತ್ತಾ ರೇಸ್ ನಲ್ಲಿದ್ದಾರೆ. ಮೂವರಲ್ಲಿ ಇಬ್ಬರಿಗೆ ಕಾರ್ಯಾಧ್ಯಕ್ಷ ಹುದ್ದೆ ನೀಡಲು ದೇವೇಗೌಡರು ಆಸಕ್ತಿ ಹೊಂದಿದ್ದು, ಕಾರ್ಯಾಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
Comments