ಅತಿರಾತ್ರ ಸೋಮಯಾಗ ಬೆಂಗಳೂರು ಸಮಿತಿಗೆ ದೊಡ್ಡಬಳ್ಳಾಪುರದ ಆರು ಮಂದಿಗೆ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ

03 Aug 2018 5:14 PM |
686 Report

ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೇವೂರು, ಉಪ್ಪಳ, ಕಾಸರಗೋಡು ಜಿಲ್ಲೆ ಇಲ್ಲಿ ಮುಂದಿನ ವರ್ಷ 2019 ಫೆಬ್ರವರಿ ತಿಂಗಳಲ್ಲಿ ದಿನಾಂಕ 18-02-2019 ರಿಂದ 24-02-2019 ರವರೆಗೆ ನಡೆಯುವ ಅತಿರಾತ್ರ ಸೋಮಯಾಗದ ಕಾರ್ಯಕಾರಿ ಸಮಿತಿ ಬೆಂಗಳೂರು ವಿಭಾಗಕ್ಕೆ ಪದಾಧಿಕಾರಿಗಳನ್ನು ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ರಚಿಸಿದ್ದು, ಜೂಲೈ ತಿಂಗಳ ಬೆಂಗಳೂರಿನ ಸಮಿತಿಯ ಸಭೆಯಲ್ಲಿ ಪ್ರಕಟಿಸಿದರು, ಗೌರವಾಧ್ಯಕ್ಷರಾಗಿ ದೊಡ್ಡಬಳ್ಳಾಪುರದ ಹಿರಿಯ ವಾಣಿಜ್ಯೋದ್ಯಮಿ ಶ್ರೀ ಹೆಚ್.ಪಿ.ಶಂಕರ್ ರವರನ್ನು ನೇಮಿಸಿದ್ದಾರೆ, ಅಧ್ಯಕ್ಷರನ್ನಾಗಿ ಡಾ.ಜಿ.ರಮೇಶ್,ಅಧ್ಯಕ್ಷರು. ಕರ್ನಾಟಕ ರಾಜ್ಯ ದೇವಾಂಗ ಸಂಘ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಕೃಪಾಶಂಕರ್, ಬೆಂ. ಸಮಿತಿಯ ಉಪಾಧ್ಯಕ್ಷರನ್ನಾಗಿ ಡಾ.ನಾರಾಯಣ್, ಸಿ.ಇ.ಓ. ಸಿವಿಕ್ ನ್ಯೂಸ್, ಆರೂಡಿ ರಮೇಶ್, ಕಾರ್ಯದರ್ಶಿ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್, ನೇಮಿಸಿದ್ದು, ಸಮಿತಿಯ ಸದಸ್ಯರನ್ನಾಗಿ ಶ್ರೀ ಕೆ.ಎಂ.ಕೃಷ್ಣಮೂರ್ತಿ, ಟ್ರಸ್ಟೀ, ಶ್ರೀ ಎಸ್.ಶಿವಾನಂದ್, ಟ್ರಸ್ಟೀ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಮತ್ತು ಶ್ರೀ ಬಿ.ಎನ್.ಉಮಾಶಂಕರ್, ಕಾರ್ಯದರ್ಶಿ,ಯುವ ಬಳಗ, ಇವರನ್ನು ನೇಮಿಸಲಾಗಿದೆ.

ಅತಿರಾತ್ರ ಸೋಮಯಾಗ...ಯಾಗದಲ್ಲಿ ಸೋಮಲತೆಯನ್ನು ಬಳಸುವುದರಿಂದ ಇದಕ್ಕೆ ಸೋಮಯಾಗ ಎಂದು ಕರೆಯುತ್ತಾರೆ, ಅತಿಯಾದ ರಾತ್ರಿ ಕ್ರಮಿಸುವುದರಿಂದ ಅತಿರಾತ್ರ ಎಂದು ಕರೆಯಲಾಗುತ್ತದೆ.  ಉತ್ತರ ಭಾರತದ ಲಡಾಖ್ ಭೂ ಭಾಗದಲ್ಲಿ ಸೋಮಲತೆಯನ್ನು ಬೆಳೆಯಲಾಗುತ್ತದೆ, ಇದು ಚಂದ್ರನಿಗೆ ಸಂಭಂದಪಟ್ಟ ಗಿಡ, ಹದಿನೈದು ಎಲೆಗಳನ್ನು ಹೊಂದಿರುತ್ತದೆ, ಶುಕ್ಲ ಪಕ್ಷದಲ್ಲಿ ಒಂದೊಂದೇ ಎಲೆ ಹೆಚ್ಚುತ್ತಾ ಹೋಗುತ್ತದೆ, ಕೃಷ್ಣ ಪಕ್ಷದಲ್ಲಿ ಒಂದೊಂದೇ ಎಲೆ ಕಡಿಮೆಯಾಗುತ್ತಾ ಹೋಗುತ್ತದೆ, ಪೌರ್ಣಮಿಗೆ ಹದಿನೈದು ಎಲೆಗಳನ್ನು ಹೊಂದಿ ಅಮಾವಾಸ್ಯೆಗೆ ಒಂದೂ ಎಲೆ ಇಲ್ಲವಾಗುವುದೇ ಈ ಗಿಡದ ವಿಶೇಷ.  ಯಾಗಕ್ಕಾಗಿ ಅಗ್ನಿಹೋತ್ರಿ ದಂಪತಿಗಳನ್ನು ಗುರುತಿಸಲಾಗಿದೆ,  ಇವರು ಕಠಿಣವಾದ ವ್ರತಗಳನ್ನು ಮಾಡಿಕೊಂಡು ಬಂದಿದ್ದಾರೆ, ಏಳು ದಿನಗಳ ಕಾಲ ಈ ದಂಪತಿಗಳು ಉಪವಾಸ ವ್ರತವನ್ನು ಮಾಡಿಕೊಂಡು, ಪ್ರತಿದಿನ ಕೊಡುವ ಕೇವಲ ಎರಡು ಲೋಟ ಹಾಲಿನೊಂದಿಗೆ ಏಳು ದಿನಗಳನ್ನು ಕಳೆಯುತ್ತಾರೆ, ೨೦೧೯ ಫೆಬ್ರವರಿ ೧೮ರಿಂದ ಪ್ರಾರಂಭವಾಗುವ ಅತಿರಾತ್ರ ಸೋಮಯಾಗವು ೨೪ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದ್ದು, ಕಡೇ ದಿನದಂದು ಯಾಗಕ್ಕೆ ಬಳಸಲ್ಪಟ್ಟಿರುವ ಯಾವುದೇ ವಸ್ತುವನ್ನು ಉಳಿಸಿಕೊಳ್ಳುವಂತಿರದ ಕಾರಣಕ್ಕೆ ಯಾಗ ಮುಗಿದ ಮೇಲೆ ಯಾಗ ಮಂಟಪಕ್ಕೆ ಅಗ್ನಿಸ್ಪರ್ಶ ಮಾಡುವುದರೊಂದಿಗೆ ಈ ಮಹಾಯಾಗವು ಸಮಾಪ್ತಿಯಾಗುತ್ತದೆ ಎಂದು ಪೂಜ್ಯರು ವಿವರಿಸಿದರು.

Edited By

Ramesh

Reported By

Ramesh

Comments