ಭೋಜನ ಪ್ರಿಯರಿಗೆ ಅಪ್ಪಾಜಿ ಕ್ಯಾಂಟೀನ್ ನಿಂದ ಭರ್ಜರಿ ಸಿಹಿಸುದ್ದಿ..! ಏನ್ ಗೊತ್ತಾ?

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಹೆಸರಿನಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಪ್ರಾರಂಭಿಸಿರುವ ಅಪ್ಪಾಜಿ ಕ್ಯಾಂಟೀನ್‌ನ ಮೊದಲ ವಾರ್ಷಿಕೋತ್ಸವ ಅಂಗವಾಗಿ 'ರಾಗಿಮುದ್ದೆ, ಬಸ್ಸಾರು, ಜೋಳದ, ರೊಟ್ಟಿ ಎಣ್ಣೆಗಾಯಿ ಭೋಜನ ಸ್ಪರ್ಧೆ' ಹಮ್ಮಿಕೊಳ್ಳಲಾಗಿದೆ. ಹನುಮಂತನಗರದ 50 ಅಡಿ ರಸ್ತೆಯಲ್ಲಿರುವ ಅಪ್ಪಾಜಿ ಕ್ಯಾಂಟೀನ್‌ಲ್ಲಿ ಆ.4 ರಂದು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿ ಉತ್ತರ ಕರ್ನಾಟಕ ಮೂಲದ ಜೋಳದ ರೊಟ್ಟಿ, ದಕ್ಷಿಣ ಕರ್ನಾಟಕದ ರಾಗಿಮುದ್ದೆ ಸಾರನ್ನು ತಿನ್ನುವವವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ನಿಗದಿತ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ರೊಟ್ಟಿ ಮತ್ತು ಮುದ್ದೆ ಸೇವಿಸುವವರಿಗೆ ಬಹುಮಾನಗಳನ್ನು ನೀಡಲಾಗುವುದು. ಮೊದಲ ಬಹುಮಾನವಾಗಿ 30 ದಿನಗಳವರೆಗೆ ಉಚಿತ ಉಪಹಾರ ಮತ್ತು ಮಧ್ಯಾಹ್ನದ ಭೋಜನ, ಎರಡನೇ ಬಹುಮಾನವಾಗಿ 20 ದಿನಗಳವರೆಗೆ ಉಚಿತ ಉಪಹಾರ ಮತ್ತು ಮಧ್ಯಾಹ್ನದ ಭೋಜನ, ತೃತಿಯ ಬಹುಮಾನವಾಗಿ 10 ದಿನಗಳ ಕಾಲ ಉಚಿತ ಉಪಹಾರ ಮತ್ತು ಭೋಜನ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೊದಲು ನೋಂದಣಿ ಮಾಡಿಕೊಂಡ 10 ಮಂದಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಆದ್ಯತೆ ನೀಡಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಮೊಬೈಲ್ ಸಂಖ್ಯೆ 8553466275 ಗೆ ನೋಂದಾಯಿಸಿಕೊಳ್ಳಬಹುದು.
Comments