ಬಿ.ಎಸ್.ವೈ ಗೆ ಬಹಿರಂಗ ಸವಾಲೆಸೆದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 20 ಗಂಟೆ ಕೆಲಸ ಮಾಡುತ್ತಿದ್ದು, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಸಂದೇಹಗಳಿದ್ದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಚರ್ಚೆಗೆ ಬರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಬಹಿರಂಗವಾಗಿ ಸಾವಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು, ಪ್ರಧಾನಿಯಾದ ದೇವೇಗೌಡರು ಕೆಲವೇ ತಿಂಗಳ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದರು. ಕುಮಾರಸ್ವಾಮಿ ಸಿಎಂ ಆಗಿದ್ದು ಕೂಡ ದೈವಾನುಗ್ರಹ. ದೇವೇಗೌಡರನ್ನು ಮುಗಿಸಬೇಕು ಎಂದು ಹೊರಟರು. ಆದರೆ ದೇವೇಗೌಡರು ಪಿಎಂ ಆಗಿದ್ದು ದೈವಾನುಗ್ರಹ ಎಂದು ಹೇಳಿದರು. ಮಾಧ್ಯಮದವರನ್ನು ಮುಂದಿಟ್ಟುಕೊಂಡು ಪ್ರತಿದಿನ ಟೀಕೆ ಮಾಡುವುದು ಸರಿಯಲ್ಲ. ಮನುಷ್ಯನಿಗೆ ಕ್ರಿಯೆ ಎನ್ನುವುದು ಇರಬೇಕು. ಬೆಳಗಾವಿಯಲ್ಲಿ 4 ಸಾವಿರ ಕೋಟಿ ರೂ. ಸಾಲಮನ್ನಾ ಆಗಿದೆ. ಉಮೇಶ್ ಕತ್ತಿ ಯಾರಿಗೆ ಸಾಲ ಕೊಟ್ಟರು ಹೇಳಲಿ? ದೇವೇಗೌಡರು ಇಲ್ಲ ಅಂದಿದ್ದರೆ ಉಮೇಶ ಕತ್ತಿ ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದರು.
Comments