Big Breaking : ಕೊನೆಗೂ ಫೈನಲ್ ಆಯ್ತು ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ..!ಯಾರ್ಯಾರಿಗೆ ಯಾವ ಜಿಲ್ಲೆ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್..
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಹಿನ್ನಲೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
26 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಕೆಲವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಕೆಲವು ಕಾಂಗ್ರೆಸ್ ಸಚಿವರಿಗೆ ಕಳೆದ ಬಾರಿ ಇದ್ದ ಜಿಲ್ಲೆಗಳ ಉಸ್ತುವಾರಿಯೇ ಈ ಬಾರಿಯೂ ಸಿಕ್ಕಿದೆ. ಜಿ.ಪರಮೇಶ್ವರ್ ಅವರಿಗೆ ತಮ್ಮ ಸ್ವ ಜಿಲ್ಲೆ ತುಮಕೂರು ಜೊತೆಗೆ ಬೆಂಗಳೂರು ನಗರ ಉಸ್ತುವಾರಿ ನೀಡಲಾಗಿದೆ. ಪರಮೇಶ್ವರ್ ಅವರಿಗೆ ಬೆಂಗಳೂರು ಉಸ್ತುವಾರಿ ವಹಿಸುವ ಬಗ್ಗೆ ಮುಂಚೆಯೇ ವಿರೋಧ ಕೇಳಿಬಂದಿತ್ತು ಆದರೂ ಬೆಂಗಳೂರು ನಗರ ಉಸ್ತುವಾರಿ ಅವರ ಕೈಗೆ ಸೇರಿದೆ.
ಇಲ್ಲಿದೆ ನೋಡಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ..!ಯಾರ್ಯಾರಿಗೆ ಯಾವ ಜಿಲ್ಲೆ?
ಜಿ.ಪರಮೇಶ್ವರ- ಬೆಂಗಳೂರು ನಗರ ಮತ್ತು ತುಮಕೂರು; ಆರ್.ವಿ. ದೇಶಪಾಂಡೆ- ಉತ್ತರ ಕನ್ನಡ ಮತ್ತು ಧಾರವಾಡ; ಡಿ.ಕೆ. ಶಿವಕುಮಾರ್- ರಾಮನಗರ ಮತ್ತು ಬಳ್ಳಾರಿ; ಕೆ.ಜೆ.ಜಾರ್ಜ್- ಚಿಕ್ಕಮಗಳೂರು; ರಮೇಶ್ ಜಾರಕಿಹೊಳಿ- ಬೆಳಗಾವಿ; ಶಿವಾನಂದ ಪಾಟೀಲ್- ಬಾಗಲಕೋಟೆ; ಪ್ರಿಯಾಂಕ್ ಖರ್ಗೆ- ಕಲಬುರಗಿ; ರಾಜಶೇಖರ.ಜಿ.ಪಾಟೀಲ್- ಯಾದಗಿರಿ; ವೆಂಕಟರಮಣಪ್ಪ- ಚಿತ್ರದುರ್ಗ; ಶಿವಶಂಕರ ರೆಡ್ಡಿ- ಚಿಕ್ಕಬಳ್ಳಾಪುರ; ಯು.ಟಿ.ಖಾದರ್- ದಕ್ಷಿಣ ಕನ್ನಡ; ಸಿ.ಪುಟ್ಟರಂಗ ಶೆಟ್ಟಿ- ಚಾಮರಾಜನಗರ; ಜಮೀರ್ ಅಹ್ಮದ್- ಹಾವೇರಿ; ಜಯಮಾಲಾ- ಉಡುಪಿ; ಆರ್. ಶಂಕರ್- ಕೊಪ್ಪಳ; ಎನ್.ಮಹೇಶ್- ಗದಗ; ವೆಂಕಟರಾವ್ ನಾಡಗೌಡ- ರಾಯಚೂರು; ಎಸ್.ಆರ್.ಶ್ರೀನಿವಾಸ್- ದಾವಣಗೆರೆ; ಸಿ.ಎಸ್.ಪುಟ್ಟರಾಜು- ಮಂಡ್ಯ; ಸಾ.ರಾ.ಮಹೇಶ್- ಕೊಡಗು; ಬಂಡೆಪ್ಪ ಕಾಶಂಪೂರ್- ಬೀದರ್; ಎಚ್.ಡಿ.ರೇವಣ್ಣ- ಹಾಸನ; ಡಿ.ಸಿ.ತಮ್ಮಣ್ಣ- ಶಿವಮೊಗ್ಗ; ಎಂ.ಸಿ.ಮನಗೋಳಿ- ವಿಜಯಪುರ; ಜಿ.ಟಿ.ದೇವೇಗೌಡ- ಮೈಸೂರು.
Comments