ಯಶಸ್ವಿಯಾಗಿ ಮುಗಿದ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆ
ಇಂದಿನ ರಾಜ್ಯ ಮಟ್ಟದ ಸ್ಪರ್ಧೆಯ ಉದ್ಘಾಟನೆಯನ್ನು ಶ್ರೀ ಸಾ.ರಾ.ಮಹೇಶ್, ಸನ್ಮಾನ್ಯ ಸಚಿವರು, ಪ್ರವಾಸೋದ್ಯಮ ಮತ್ತು ರೇಷ್ಮೆ ಇಲಾಖೆ, ಕರ್ನಾಟಕ ಸರ್ಕಾರ. ನೆರವೇರಿಸಿದರು, ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಮಣಯ್ಯ, ನಗರಸಭಾಧ್ಯಕ್ಷ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿ ಹಾಜರಿದ್ದರು, ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ತಿಮ್ಮೇಗೌಡ, ಐ.ಎ.ಎಸ್. ಅಧ್ಯಕ್ಷರು.ಕರ್ನಾಟಕ ಜಾನಪದ ಪರಿಷತ್ತು, ಶ್ರೀ ಕೆ.ಎಂ.ಹನುಮಂತರಾಯಪ್ಪ, ಅಧ್ಯಕ್ಷರು. ಕೇಂದ್ರ ರೇಷ್ಮೆ ಮಂಡಲಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಸದಸ್ಯೆ ಮಂಜುಳ, ಶ್ರೀಮತಿ. ಪಂಕಜಾನಾಯಕ್, ಅಧ್ಯಕ್ಷರು, ಶಂಕರ್ ನಾಯಕ್ ಚಾರಿಟಬಲ್ ಟ್ರಸ್ಟ್, ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ರಾಷ್ಟ್ರ ಮಟ್ಟದ ಗಾಳಿಪಟ ಕಲಾವಿದರುಗಳಾದ ಶ್ರೀ ಸುದರ್ಶನಕಡ್ಡಿ ಬೆಳಗಾವಿ, ಗೋಲ್ಡನ್ ಕೈಟ್ ಕ್ಲಬ್, ಮುಂಬೈ, ಕೋಹಿನೂರ್ ಕೈಟ್ ಕ್ಲಬ್, ತೆಲಂಗಾಣ, ವಿಬ್ರಾಂತ್ ಕೈಟ್ ಕ್ಲಬ್, ಗುಜರಾತ್, ಪ್ಲೈ 360 ಮುಂಬೈ, ಶ್ರೀ ದಿಗಂತ್ ಜೋಷಿ, ಶ್ರೀಮತಿ. ಜಾಗೃತಿ ಜೋಷಿ, ಪ್ರಸನ್ನ ಮಿಶ್ರಿಕೋಟಿ, ಸುದೀಪ್, ಪಾಂಡಿಚೆರಿಯ ಸೌಮ್ಯ, ಶಿವ, ಶ್ರೀ ಅಜಯ್ ಕುಮಾರ್ ವಕಾರಿಯ, ಶ್ರೀ ಜೆಟ್ ಗಿರ್ ಗೋಸಾಯ್, ರಾಜಾಸ್ಥಾನ್ ಮತ್ತು ಹೇಮಂತ್ ಕುಮಾರ್ ಬೆಂಗಳೂರು ಇವರುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು
ಬಹುಮಾನ ಪಡೆದವರ ವಿವರ: ಒಟ್ಟು ನೂರ ಅರವತ್ತೆಂಟು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
12 ವರ್ಷದೊಳಗಿನ ಕಿರಿಯರ ವಿಭಾಗದಲ್ಲಿ ಮನುಷಣ್ಮುಖ ಪ್ರಥಮ [2,೦೦೦/- ರೂ.] ಸುಹಾಸ್ ದ್ವಿತೀಯ [ 1,೦೦೦/- ರೂ.] ಉಜ್ವಲ್ ಮೂರನೇ ಬಹುಮಾನ [ 5೦೦/- ರೂ.] 13ರರಿಂದ 22 ವರ್ಷದೊಳಗಿನವರು, ವೇಣು ಪ್ರಥಮ [3,೦೦೦/- ರೂ.] ಲಿಖಿಷ್ ದ್ವಿತೀಯ [ 2,೦೦೦/- ರೂ.] ಹರೀಶ ಮೂರನೇ ಬಹುಮಾನ [ 1,೦೦೦/- ರೂ.]
23 ವರ್ಷ ಮೇಲ್ಪಟ್ಟವರು ಮುನಿರಾಜು ಪ್ರಥಮ [3,5೦೦/- ರೂ.] ನವೀನ್ ಕುಮಾರ್ ದ್ವಿತೀಯ [ 1,5೦೦/- ರೂ.] ಹರೀಶ ಮೂರನೇ ಬಹುಮಾನ [ 1,೦೦೦/- ರೂ.]
23 ವರ್ಷ ಮೇಲ್ಪಟ್ಟವರು [ಗುಂಪು] ನರೇಂದ್ರಬಾಬು ಪ್ರಥಮ [5,೦೦೦/- ರೂ.] ನವೀನ್ ದ್ವಿತೀಯ [ 3,೦೦೦/- ರೂ.] ನವೀನ್ ಎನ್. ಮೂರನೇ ಬಹುಮಾನ [ 1,5೦೦/- ರೂ.]
ಮಹಿಳಾ ವಿಭಾಗ : ವೀಣಾ ಪ್ರಥಮ [2,೦೦೦/- ರೂ.] ಲಕ್ಷ್ಮೀ ಎನ್.ಜಿ. ದ್ವಿತೀಯ [ 1,೦೦೦/- ರೂ.] ರಮ್ಯಾ ಮೂರನೇ ಬಹುಮಾನ [5೦೦/- ರೂ.]
ಎಲ್ಲಾ ವಿಭಾಗಗಳಲ್ಲೂ ತಲಾ ಇಬ್ಬರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
Comments