ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಂಡ ರಾಜ್ಯದ ದಳಪತಿ ಕುಮಾರಣ್ಣ..!!
ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಜೆಡಿಎಸ್ ಗಳಿಸಿದ್ದ ಕೇವಲ 39 ಸ್ಥಾನಗಳನ್ನು ಆದರೆ 104 ಸ್ಥಾನ ಗಳಿಸಿದ್ದ ಬಿಜೆಪಿಯನ್ನು ಅಧಕಾರದಿಂದ ದೂರವಿಡಲು ಕಾಂಗ್ರೆಸ್ ಜತೆ ಕೈಸೇರಿಸಿದ್ದರಿಂದ ಅದೃಷ್ಟದ ಕಾರಣಕ್ಕಾಗಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಗೇರಿದರು.
ಮಾತಿಗೆ ತಕ್ಕಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಾವು ಮಂಡಿಸಿದ ಮೊದಲ ಬಜೆಟ್‌ನಲ್ಲೇ ರೈತರ ಸಾಲ ಮನ್ನಾ ಘೋಷಿಸಿದರು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 2 ಲಕ್ಷದವರೆಗೆ ಸಾಲ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿನ ಸಾಲವನ್ನು ಬಜೆಟ್ ದಿನ ಘೋಷಿಸಿದ್ದರು. ಆದರೆ ಬಜೆಟ್‌ನಲ್ಲಿ ಘೋಷಿಸಿದ ಸಹಕಾರಿ ಬ್ಯಾಂಕುಗಳ ಚಾಲ್ತಿ ಸಾಲವನ್ನು ಪ್ರತಿಪಕ್ಷ ಶಾಸಕರು ಹಾಗೂ ನಾಯಕರ ಒತ್ತಾಯಕ್ಕೆ ಮಣಿದು ಮನ್ನಾ ಮಾಡುವ ಮೂಲಕ ಒಟ್ಟು 49 ಕೋಟಿ ಸಾಲ ಮನ್ನಾ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ. ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲವನ್ನೂ ಮನ್ನಾ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಧಾನಸೌಧದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಭೆಯೊಂದನ್ನು ನಡೆಸಿದರು. ರಾಷ್ಟ್ರೀಕೃತ ಸಾಲಗಳನ್ನು ಮನ್ನಾ ಮಾಡುವ ವೇಳೆ ರಾಜ್ಯ ಸರ್ಕಾರ ನಾಲ್ಕು ವರ್ಷಗಳಲ್ಲಿ ನಾಲ್ಕು ಕಂತುಗಳಲ್ಲಿ ಹಣವನ್ನು ಮರುಪಾವತಿ ಮಾಡುವಂತಾಗಲು ಮಾರ್ಗಸೂಚಿ ರಚಿಸುವ ಸಂಬಂಧ ಉಪಸಮಿತಿಯನ್ನು ರಚಿಸಲಾಗಿದೆ. ಹಣ ಮರುಪಾವತಿ ಕುರಿತಂತೆ ಯೋಜನೆಯನ್ನು ರೂಪಿಸಲಿದ್ದು ರಾಜ್ಯದಲ್ಲಿ ಸಾಲಮನ್ನಾ ಯೋಜನೆ ಜಾರಿಗೊಳ್ಳಲಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ರಾಜ್ಯದ ರೈತರು ಸಂಪೂರ್ಣ ಸಾಲ ಮುಕ್ತನ್ನಾಗಿ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಡೆ ಹುಟ್ಟಿಸಿದೆ.
Comments