ರಾಷ್ಟ್ರ ಮಟ್ಟದ ಗಾಳಿಪಟ ಕಲಾವಿದರುಗಳಿಂದ ಗಾಳಿಪಟಗಳ ಹಾರಾಟ ಆರಂಭ...
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಜ್ಯ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘ ರಿ. ಇವರ ಸಹಯೋಗದೊಂದಿಗೆ ಇಂದು ಬೆಳಿಗ್ಗೆ 11 ಘಂಟೆಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಗಾಳಿಪಟ ಉತ್ಸವವನ್ನು ಎನ್.ಮುನಿನಂಜಪ್ಪ ಲೇಔಟ್, ಭುವನೇಶ್ವರಿ ನಗರ, ದೊಡ್ಡಬಳ್ಳಾಪುರ ಇಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಎಸ್.ಪಾಲಯ್ಯ,ಐ.ಎ.ಎಸ್. ಜಿಲ್ಲಾಧಿಕಾರಿಗಳು, ಹಾಗೂ ಜಿಲ್ಲಾ ದಂಡಾಧಿಕಾರಿಗಳು. ಬೆಂ.ಗ್ರಾ.ಜಿಲ್ಲೆ, ಶ್ರೀಮತಿ. ಲತಾ.ಆರ್. ಐ.ಎ.ಎಸ್. ಮುಖ್ಯಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ,ಬೆಂ.ಗ್ರಾ.ಜಿಲ್ಲೆ, ಶ್ರೀ ತಿಮ್ಮೇಗೌಡ, ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್, ಶ್ರೀ ಟೀ.ಎಸ್. ಶಿವಕುಮಾರ್ ಐ.ಪಿ.ಎಸ್. ಜಿಲ್ಲಾ ಪೋಲೀಸ್ ರಕ್ಷಣಾಧಿಕಾರಿಗಳು, ಜಿಲ್ಲಾ ಪಂಚಾಯಿತಿ, ಬೆಂ.ಗ್ರಾ.ಜಿಲ್ಲೆ ಹಾಗೂ ಶ್ರೀ ಆದಿತ್ಯ ನಂಜರಾಜ್, ಮ್ಯಾನೇಜಿಂಗ್ ಟ್ರಸ್ಟೀ, ಕರ್ನಾಟಕ ಜಾನಪದ ಪರಿಷತ್, ಶ್ರೀ ತ.ನ ಪ್ರಭುದೇವ್, ಅಧ್ಯಕ್ಷರು. ನಗರಸಭೆ ಹಾಗೂ ಉಪಾಧ್ಯಕ್ಷೆ ಜಯಲಕ್ಷ್ಮಿ ಹಾಜರಿದ್ದರು.
ರಾಷ್ಟ್ರ ಮಟ್ಟದ ಗಾಳಿಪಟ ಕಲಾವಿದರುಗಳಾದ ಶ್ರೀ ಸುದರ್ಶನಕಡ್ಡಿ ಬೆಳಗಾವಿ, ಗೋಲ್ಡನ್ ಕೈಟ್ ಕ್ಲಬ್, ಮುಂಬೈ, ಕೋಹಿನೂರ್ ಕೈಟ್ ಕ್ಲಬ್, ತೆಲಂಗಾಣ, ವಿಬ್ರಾಂತ್ ಕೈಟ್ ಕ್ಲಬ್, ಗುಜರಾತ್, ಪ್ಲೈ 360 ಮುಂಬೈ, ಶ್ರೀ ದಿಗಂತ್ ಜೋಷಿ, ಶ್ರೀಮತಿ. ಜಾಗೃತಿ ಜೋಷಿ, ಪ್ರಸನ್ನ ಮಿಶ್ರಿಕೋಟಿ, ಸುದೀಪ್, ಪಾಂಡಿಚೆರಿಯ ಸೌಮ್ಯ, ಶಿವ, ಶ್ರೀ ಅಜಯ್ ಕುಮಾರ್ ವಕಾರಿಯ, ಶ್ರೀ ಜೆಟ್ ಗಿರ್ ಗೋಸಾಯ್, ರಾಜಾಸ್ಥಾನ್ ಮತ್ತು ಹೇಮಂತ್ ಕುಮಾರ್ ಬೆಂಗಳೂರು ಇವರು ಗಾಳಿಪಟಗಳ ಪ್ರದರ್ಶನ ನೀಡಿದರು.
Comments