ಜಾತ್ಯಾತೀತ ಪಕ್ಷಗಳ ಜಾತ್ಯಾತೀತ ನಾಯಕರು ತಿಳಿದುಕೊಳ್ಳಲೇಬೇಕಾದ ವಿಷಯ....
ಕಾಳಿಕಾ ಛಾಯೆ! ಕುಮಾರಿ ಚೈತ್ರ...ಮಾತಿಗೆ ನಿಂತರೆ ಘರ್ಜಿಸುವ ಸಿಂಹಿಣಿ, ವಯಸ್ಸಿಗೆ ಮೀರಿದ ಪ್ರತಿಭೆ, ಒಮ್ಮೆ ಮಾತು ಶುರು ಮಾಡಿದರೆ ಭೋರ್ಗರೆಯುವ ಜಲಪಾತ, ಎಲ್ಲ ಯುವಕ ಯುವತಿಯರು ಕೇಳಲೇಬೇಕಾದ ಮಾತುಗಳು, ಹೇಳುವ ರೀತಿ ನೇರ, ದಿಟ್ಟ, ಯಾವುದೇ ಅಂಜಿಕೆ ಇಲ್ಲ, ಎಲ್ಲ ಪಕ್ಷಗಳಲ್ಲಿರುವ ಅದರಲ್ಲೂ ಜಾತ್ಯಾತೀತರ ಮುಖವಾಡದಾರಿ ರಾಜಕೀಯ ನಾಯಕರು ತಿಳಿದುಕೊಳ್ಳುವ ಬಹಳಷ್ಟು ವಿಷಯ ಸಹೋದರಿ ಚೈತ್ರಾರಲ್ಲಿದೆ, ಇಂತಹ ಕಾರ್ಯಕ್ರಮಕ್ಕೆ ಜಾತ್ಯಾತೀತ ಪಕ್ಷಗಳ ನಾಯಕರುಗಳು ಅಥವ ಕಾರ್ಯಕರ್ತರುಗಳ ಹಾಜರಾತಿ ಸೊನ್ನೆ. ಭಾರತ ಮಾತಾ ಪೂಜಾ ಕಾರ್ಯಕ್ರಮ ಏರ್ಪಡಿಸಿ ಚೈತ್ರಾರ ದಿಕ್ಸೂಚಿ ಭಾಷಣಕ್ಕೆ ಅವಕಾಶ ಮಾಡಿಕೊಟ್ಟ ದೇವರಜನಗರದ ಆಶಾಕಿರಣ ಯುವಕ ಸಂಘದವರು ಹಾಗೂ ಸಹೋದರಿಯನ್ನು ಊರಿಗೆ ಕರೆತರಲು ಶ್ರಮಿಸಿದ ಹಿಂದೂ ಜಾಗರಣಾ ವೇದಿಕೆ ಸದಸ್ಯರು ಅಭಿನಂದನಾರ್ಹರು. ಭಾಷಣ ಕೇಳಲು ಆಸಕ್ತಿ ಇದ್ದವರು ಯೂ ಟ್ಯೂಬಲ್ಲಿ ವೀಕ್ಷಿಸಿ.
Comments