ನೂತನ ನಗರಸಭಾ ಸದಸ್ಯ ಭಾಸ್ಕರ್ ಗೆ ಡಿಪಿಎ ವತಿಯಿಂದ ಸನ್ಮಾನ

27 Jul 2018 5:23 AM |
494 Report

ದೊಡ್ಡಬಳ್ಳಾಪುರ ತಾಲ್ಲೂಕು ವಿಡಿಯೋ ಮತ್ತು ಛಾಯಾಗ್ರಾಹಕ ಸಂಘದ ವತಿಯಿಂದ ದಿನಾಂಕ 26-7-2018 ಗುರುವಾರ ಟಿಬಿ ವೃತ್ತದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ನಗರಸಭೆಯ 22 ನೇ ವಾರ್ಡಿಗೆ ಆಯ್ಕೆಯಾಗಿರುವ ಸಂಘದ ಹಿರಿಯ ಛಾಯಾಗ್ರಾಹಕರೂ ಹಾಗೂ ಮಾಜಿ ಅಧ್ಯಕ್ಷರೂ ಆಗಿರುವ ಭಾಸ್ಕರ್ ರವರಿಗೆ ಸರಳ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು, ಸನ್ಮಾನಿತ ಭಾಸ್ಕರ್ ಮಾತನಾಡಿ ಛಾಯಾಗ್ರಾಹಕ ಸಂಘದಲ್ಲಿರುವ ಬಹಳಷ್ಟು ಮಂದಿ ಮೂರೂ ಪಕ್ಷಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ, ಮುಂದಿನ ವರ್ಷ ನಡೆಯುವ ನಗರಸಭೆಯ ಚುನಾವಣೆಗೆ ಎಲ್ಲಾ ವಾರ್ಡ್ ಗಳಲ್ಲಿಯೂ ಸ್ಪರ್ಧಿಸಿ ಹೆಚ್ಚಿನ ಸಂಖ್ಯೆಯಲ್ಲಿ ನಗರಸಭೆಗೆ ಆಯ್ಕೆಯಾಗಿ ಊರಿನ ಅಭಿವೃದ್ದಿಗೆ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳೋಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ವಿ.ಎಸ್. ರವಿಕುಮಾರ್, ಮಾಜಿ ಅಧ್ಯಕ್ಷರಾದ ಪಿಳ್ಳವೆಂಕಟಪ್ಪ, ಅಂಜನ ಗೌಡ, ಉಪಾಧ್ಯಕ್ಷ ಈಶ್ವರ್, ಕಾರ್ಯದರ್ಶಿ ಸುರೇಶ್, ಖಜಾಂಚಿ ಮೋಹನ್ ಮತ್ತು ಎಲ್ಲಾ ನಿರ್ದೇಶಕರು ಹಾಜರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀಡಿಗೆರೆ ರವಿಕುಮಾರ್ ವಹಿಸಿದ್ದರು.

Edited By

Ramesh

Reported By

Ramesh

Comments