ಕುಮಾರಿ ಚೈತ್ರಾ, ಕುಂದಾಪುರ ಇವರ ಜೊತೆ ಶುಕ್ರವಾರ ಬೆಳಿಗ್ಗೆ 11ಕ್ಕೆ ಮಹಿಳೆಯರ ಜೊತೆ ಸಂವಾದ. ಸಂಜೆ ಭಾರತ ಮಾತಾ ಪೂಜಾ ಕಾರ್ಯಕ್ರಮ

26 Jul 2018 6:33 PM |
354 Report

ನಗರದ ದೇವರಾಜ ನಗರದಲ್ಲಿರುವ ಆಶಾಕಿರಣ ಯುವಕರ ಸಂಘ, ಹಿಂದೂ ಜಾಗರಣ ವೇದಿಕೆ ಮತ್ತು ಬಜರಂಗದಳ ಇವರ ವತಿಯಿಂದ ದಿನಾಂಕ 27-7-2018 ರ ಶುಕ್ರವಾರ ಬೆಳಿಗ್ಗೆ 11ಕ್ಕೆ ಮಹಿಳೆಯರ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ, ಸ್ಥಳ: ಶ್ರೀಮತಿ ದಾಕ್ಷಾಯಿಣಿಯವರ ಸ್ವಗೃಹ, ಮಾಂಗಲ್ಯ ಕಲ್ಯಾಣ ಮಂಟಪ ರಸ್ತೆ, ಆಸಕ್ತ ಮಹಿಳೆಯರು ಆಗಮಿಸಬೇಕೆಂದು ಕೋರಲಾಗಿದೆ. ಸಂಜೆ 6 ಘಂಟೆಗೆ ಪದ್ಮಶಾಲಿ ಕಲ್ಯಾಣ ಮಂದಿರದ ಪಕ್ಕದಲ್ಲಿರುವ ಮೈದಾನದಲ್ಲಿ ಗುರು ಪೌರ್ಣಿಮೆ ಪ್ರಯುಕ್ತ ಭಾರತ ಮಾತಾ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ, ದಿವ್ಯ ಸಾನಿಧ್ಯವನ್ನು ಖಾನಿಮಠಾಧ್ಯಕ್ಷರಾದ ಶ್ರೀ ನಿ|| ಪ್ರ|| ಸ್ವ|| ವಿದ್ವಾನ್ ಬಸವರಾಜ ಸ್ವಾಮೀಜಿಯವರು ವಹಿಸಲಿದ್ದಾರೆ, ಪ್ರಮುಖ ಭಾಷಣಾಕಾರರಾಗಿ ಚೈತ್ರಾ ಕುಂದಾಪುರ, ಹಿಂದೂ ಕಾರ್ಯಕರ್ತೆ, ಆಗಮಿಸುತ್ತಿದ್ದಾರೆ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಗಂಗಾದರಯ್ಯ ವಹಿಸಲಿದ್ದಾರೆ, ಎಲ್ಲಾ ದೇಶ ಭಕ್ತ ಅಭಿಮಾನಿಗಳು, ಸಾರ್ವಜನಿಕರು ಆಗಮಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

For details Dakshayini: 9110250697

Edited By

Ramesh

Reported By

Ramesh

Comments