ಜುಲೈ 29-30 ರ ಭಾನುವಾರ ಮತ್ತು ಸೋಮವಾರ 30 ನೇ ವರ್ಷದ ರಾಜ್ಯ ಮಟ್ಟದ ಗಾಳಿಪಟ ಉತ್ಸವ-2018
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಜ್ಯ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘ ರಿ. ಇವರ ಸಹಯೋಗದೊಂದಿಗೆ ಜುಲೈ ತಿಂಗಳ 29 ರ ಭಾನುವಾರ ಮತ್ತು 30 ನೇ ಸೋಮವಾರದಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಗಾಳಿಪಟ ಉತ್ಸವವನ್ನು ಎನ್.ಮುನಿನಂಜಪ್ಪ ಲೇಔಟ್, ಭುವನೇಶ್ವರಿ ನಗರ, ದೊಡ್ಡಬಳ್ಳಾಪುರ. ಇಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸಾ.ರಾ.ಮಹೇಶ್, ಸನ್ಮಾನ್ಯ ಸಚಿವರು, ಪ್ರವಾಸೋದ್ಯಮ ಮತ್ತು ರೇಷ್ಮೆ ಇಲಾಖೆ, ಕರ್ನಾಟಕ ಸರ್ಕಾರ, ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಟಿ.ವೆಂಕಟರಮಣಯ್ಯ, ಶಾಸಕರು,ದೊಡ್ಡಬಳ್ಳಾಪುರ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶ್ರೀ ಡಾ.ಎಂ.ವೀರಪ್ಪಮೊಯಿಲಿ, ಸಂಸದರು, ಎಂ.ಟಿ.ಬಿ.ನಾಗರಾಜ್, ಶಾಸಕರು ಹೊಸಕೋಟೆ, ಶ್ರೀ ನಿಸರ್ಗ ನಾರಾಯಣಸ್ವಾಮಿ, ಶಾಸಕರು ದೇವನಹಳ್ಳಿ, ಶ್ರೀ ಡಾ.ಕೆ.ಶ್ರೀನಿವಾಸಮೂರ್ತಿ, ಶಾಸಕರು ನೆಲಮಂಗಲ ಹಾಗೂ ವಿಧಾನಪರಿಷತ್ ಸದಸ್ಯರಾದಂತಹ ಶ್ರೀ ಪುಟ್ಟಣ್ಣ, ಶ್ರೀ ರಾಮಚಂದ್ರ ಗೌಡ, ಶ್ರೀ ಎಸ್.ರವಿ, ಅ.ದೇವೇಗೌಡ ಆಗಮಿಸಲಿದ್ದಾರೆ.
ದಿನಾಂಕ 29-7-2018 ಭಾನುವಾರ ಬೆಳಿಗ್ಗೆ 10 ಘಂಟೆಗೆ ಉದ್ಘಾಟನಾ ಸಮಾರಂಭ, 10-30 ರಿಂದ ಮಧ್ಯಾನ್ಹ 1 ರವರೆಗೆ ಹೊರರಾಜ್ಯಗಳಿಂದ ಆಗಮಿಸಿರುವ ಗಾಳಿಪಟ ಕಲಾವಿದರು ಹಾಗೂ ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ಸದಸ್ಯರುಗಳಿಂದ ಗಾಳಿಪಟ ಹಾರಾಟದ ಪ್ರದರ್ಶನ, ಮಧ್ಯಾನ್ಹ 2 ರಿಂದ 7 ರವರೆಗೆ ಗಾಳಿಪಟಗಳ ಹಾರಾಟ ಪ್ರದರ್ಶನ ಇರುತ್ತದೆ. ದಿನಾಂಕ 30-7-2018 ಸೋಮವಾರ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆ ಮಧ್ಯಾನ್ಹ 12 ರಿಂದ 3 ಘಂಟೆಯವರೆಗೆ ಇರುತ್ತದೆ. ಸಂಜೆ 4 ಘಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ಇರುತ್ತದೆ.
ಹೆಚ್ಚಿನ ಮಾಹಿತಿಗೆ ಸಂದೇಶ್ ಕಡ್ಡಿ: 9448192287 ಪ್ರಕಾಶ್ ಗಾಳಿಪಟ: 9008808091 ಎಲ್.ಎಂ.ಸುಹಾಸ್: 9738111531 ಸಂಪರ್ಕಿಸುವುದು.
Comments