ಗುಡ್ ನ್ಯೂಸ್ : ಬಿಪಿಎಲ್ ಕಾರ್ಡ್ ದಾರರಿಗೆ ಮತ್ತೊಂದು ಬಂಪರ್ ಗಿಫ್ಟ್ ಕೊಟ್ಟ ಸಚಿವ ಜ಼ಮೀರ್ ಅಹಮದ್
ಬಿಪಿಎಲ್ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ (LPG), ಒಲೆ ವಿತರಿಸುವ 'ಮುಖ್ಯಮಂತ್ರಿ ಅನಿಲ ಭಾಗ್ಯ' ಯೋಜನೆಯು ಜುಲೈ 15 ರಿಂದ ಜಾರಿಗೆ ಬರಲಿದೆ ಅಂತ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಜ಼ಮೀರ್ ಅಹಮದ್ ಅವರು ಹೇಳಿದ್ದಾರೆ.
ಇಂದು ಅನಿಲ ಭಾಗ್ಯ ಯೋಜನೆ ಕುರಿತ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜ಼ಮೀರ್ ಅಹಮದ್ ಅನಿಲ ಭಾಗ್ಯ ಯೋಜನೆಗೆ 32 ಲಕ್ಷ ಅರ್ಜಿ ಬಂದಿದೆ, ಮೂರು ಹಂತದಲ್ಲಿ ಯೋಜನೆ ಅನುಷ್ಠಾನ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಮೊದಲ ಹಂತದಲ್ಲಿ 10 ಲಕ್ಷ ಸ್ಟೌವ್, ಗ್ಯಾಸ್ ಕನೆಕ್ಷನ್ ನೀಡಲಾಗುತ್ತೆ. ನಂತರ ಎರಡು ಹಂತದಲ್ಲಿ ಉಳಿದವರಿಗೆ ಗ್ಯಾಸ್ ಸ್ಟೌವ್, ಗ್ಯಾಸ್ ಸಂಪರ್ಕ ನೀಡುತ್ತೇವೆ ಅಂತ ತಿಳಿಸಿದರು. ಇದೇ ವೇಳೆ ಮಾತನಾಡಿ ಅವರು ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಅನಿಲ ಭಾಗ್ಯಕ್ಕೆ ಬರ್ತಿಲ್ಲ,ಸಂಪೂರ್ಣ ರಾಜ್ಯ ಸರ್ಕಾರವೇ ಹಣ ನೀಡುತ್ತಿದೆ. ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಯೋಜನೆ ವಿಳಂಬ ಆಗಿದೆ ಅಂತ ಹೇಳಿದರು.
Comments