270 ಮಂದಿ ದಾನಿಗಳಿಂದ ಚಂದ್ರಶೇಖರ ಆಜಾದ್ ಸವಿನೆನಪಿಗೆ ರಕ್ತದಾನ







ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ರವರ ಹುಟ್ಟುಹಬ್ಬದ ಸವಿನೆನಪಿಗಾಗಿ ಭಾರತೀಯ ಜನತಾ ಪಾರ್ಟಿ ಮತ್ತು ಯುವ ಮೊರ್ಚಾ ದೊಡ್ಡಬಳ್ಳಾಪುರ ವತಿಯಿಂದ ಇಂದು ನಗರದ ಮುಖ್ಯ ರಸ್ತೆಯಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಬೆಳಿಗ್ಗೆ ಎಂಟು ಘಂಟೆಯಿಂದ ಸಂಜೆ ನಾಲ್ಕು ಘಂಟೆಯವರೆಗೆ ಏರ್ಪಡಿಸಲಾಗಿತ್ತು, ಬೆಳಿಗ್ಗೆ 9 ಘಂಟೆಗೆ ಆರಂಭವಾದ ರಕ್ತದಾನ ಶಿಬಿರದಲ್ಲಿ ಸಂಜೆ ನಾಲ್ಕು ಘಂಟೆಯವರೆಗೆ 270 ಮಂದಿ ರಕ್ತದಾನಿಗಳು ಸ್ವಯಂ ಪ್ರೇರಣೆಯಿಂದ ಬಂದು ರಕ್ತದಾನ ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷರಾದ ಶ್ರೀ ಕೆ.ಎಂ.ಹನುಮಂತರಾಯಪ್ಪ ಉದ್ಘಾಟಿಸಿದರು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಮಾಜಿ ನಗರಸಭೆ ಅಧ್ಯಕ್ಷ ಮುದ್ದಪ್ಪ, ನ್ಯಾಯವಾದಿ ರವಿ ಮಾವಿನಕುಂಟೆ, ನಗರಸಭಾ ಸದಸ್ಯರಾದ ಕಂಬಿ ನಂಜಪ್ಪ, ವೆಂಕಟರಾಜು, ನಗರ ಅಧ್ಯಕ್ಷ ರಂಗರಾಜು, ಮಹಿಳಾ ಮೋರ್ಚ ಅಧ್ಯಕ್ಷೆ ವತ್ಸಲ, ನಗರ ಅಧ್ಯಕ್ಷೆ ಗಿರಿಜ, ಜಿಲ್ಲಾಧ್ಯಕ್ಷೆ ಪುಷ್ಪಶಿವಶಂಕರ್, ಯುವ ಮೋರ್ಚ ಉಪಾಧ್ಯಕ್ಷ ಶಿವು, ಮಹಿಳಾ ಘಟಕದ ಕಮಲ, ದಾಕ್ಷಾಯಣಿ, ಉಮಾ ಮಹೇಶ್ವರಿ, ರಾಮಕೃಷ್ಣ, ಶ್ರೀನಿವಾಸ್, ನಂಜುಂಡ, ಕೃಷ್ಣಮೂರ್ತಿ, ಹಾಜರಿದ್ದರು.
ಈ ಬಾರಿ ಮಹಿಳಾ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತ ನೀಡಿದ್ದು ವಿಶೇಷವಾಗಿತ್ತು, ನಮೋ ಸೇನೆ ಬಳಗ, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಆಟೋ ಡ್ರೈವರ್ ಗಳು, ಪೌರ ಕಾರ್ಮಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಬಂದು ರಾಕ್ತದಾನ ಮಾಡಿದರು. ರಾಷ್ಟ್ರೋತ್ತಾನ ರಕ್ತನಿದಿಯ ಡಾ. ಈಶ್ವರ್, ಡಾ.ತೇಜಸ್ ಮತ್ತು ತಂಡದವರು ರಕ್ತದಾನಿಗಳಿಂದ ರಕ್ತ ಸಂಗ್ರಹಿಸಿದರು.
Comments