ಶ್ರೀ ಶಿರ್ಡಿಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮ ಮಹೋತ್ಸವ




ನಗರದ ರಂಗಪ್ಪ ಸರ್ಕಲ್ ಬಳಿ ಇರುವ ಶ್ರೀ ಶಿರ್ಡಿಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ ವತಿಯಿಂದ ದಿನಾಂಕ 27-7-2018 ಶುಕ್ರವಾರದಂದು ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಶಿರ್ಡಿಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಶ್ರೀ ಶಿರಡಿ ಸಾಯಿಬಾಬಾರವರಿಗೆ ವಿಶೇಷ ಅಲಂಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ, ಶುಕ್ರವಾರ ಬೆಳಿಗ್ಗೆ 5-30 ರಿಂದ 6-00 ರವರೆಗೆ ಕಾಕಡ ಆರತಿ, 6-00 ರಿಂದ 8-30 ರವರೆಗೆ ಭಕ್ತ ಬಾಂಧವರಿಂದ ಸುಗಂಧ ಧ್ರವ್ಯಾಭಿಷೇಕ, 8-30 ರಿಂದ 9-30 ರವರೆಗೆ ಪಂಚಾಂಮೃತ ಅಭಿಷೇಕ, ಸಾಯಿ ರುದ್ರಾಭಿಷೇಕ, ಅಲಂಕಾರ ದ್ವಾರಕಾಮಯಿ ಪೂಜೆ ಮತ್ತು ಗೋಪೂಜೆ, 9-30 ರಿಂದ 10-30 ರವರೆಗೆ ಶ್ರೀ ಗಣಪತಿ ಹೋಮ, ಶ್ರೀ ಗುರುದತ್ತಾತ್ರೇಯ ಹೋಮ ಹಾಗೂ ಶ್ರೀ ಗಾಯತ್ರಿ ಹೋಮ, 10-30 ರಿಂದ 12-00 ರವರೆಗೆ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ.
ಮಧ್ಯಾನ್ಹ 4-00 ರಿಂದ 5-00 ರವರೆಗೆ ಶ್ರೀ ವಾಸವಿ ಮಹಿಳಾ ಮಂಡಲಿ, ಶ್ರೀ ಗಾಯತ್ರಿ ಮಹಿಳಾ ಟ್ರಸ್ಟ್, ಶ್ರೀ ಚೌಡೇಶ್ವರಿ ಮಹಿಳಾ ಮಂಡಲಿ ಮತ್ತು ಬ್ರಾಹ್ಮಣರ ಮಹಿಳಾ ಸಂಘ ಇವರುಗಳಿಂದ ಸಾಮೂಹಿಕ ವಿಷ್ಣು ಪಾರಾಯಣ, ಸಂಜೆ 5-00 ರಿಂದ 5-30 ರವರೆಗೆ ಶ್ರೀ ಸಾಯಿಬಾಬಾರವರಿಗೆ ರೂಪಾರತಿ, ಸಂಜೆ 6-30 ರಿಂದ 7-30 ರವರೆಗೆ ಗಾನಸುಧಾ ಲಲಿತಕಲಾ ತಂಡದವರಿಂದ ಶ್ರ್ರೀ ಸಾಯಿ ಭಜನೆ ಇರುತ್ತದೆ, ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತ ಬಾಂಧವರು ಭಾಗವಹಿಸಲು ಕೋರಲಾಗಿದೆ.
Comments