ನಗರಸಭೆ ವತಿಯಿಂದ ಮಹಿಳೆಯರಿಗೆ ಹೊಲಿಗೆಯಂತ್ರ, ದಿವ್ಯಾಂಗ ವ್ಯಕ್ತಿಗಳಿಗೆ ತ್ರಿಚಕ್ರ ವಾಹನ ವಿತರಣೆ

20 Jul 2018 9:02 PM |
327 Report

ನಗರಸಭೆ ವತಿಯಿಂದ ನೂತನವಾಗಿ ನವೀಕರಣಗೊಂಡಿರುವ ಡಾ||ರಾಜಕುಮಾರ್ ಕಲಾಮಂದಿರದಲ್ಲಿ ಮಹಿಳೆಯರು ಸ್ವಾವಲಂಬನೆಯಿಂದ ಬದುಕಲು ಅನುಕೂಲವಾಗುವಂತೆ ಮಹಿಳೆಯರಿಗೆ ಹೊಲಿಗೆಯಂತ್ರ ನೀಡುವುದರ ಮೂಲಕ ನೆರವು ನೀಡಿದರು, ರಾಜ್ಯ ಸರ್ಕಾರ ನೀಡುವ ಅನುದಾನದಲ್ಲಿ ನಗರಸಭೆ ವತಿಯಿಂದ ಸುಮಾರು ನೂರಕ್ಕೂ ಹೆಚ್ಚು ಮಹಿಳೆಯರು ಫಲಾನುಭವಿಗಳಾದರು, ಶಾಸಕ ವೆಂಕಟರಮಣಯ್ಯ ಸಾಂಕೇತಿಕವಾಗಿ ಐದು ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡುವುದರೊಂದಿಗೆ ಈ ಕಾರ್ಯಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ನಗರದಲ್ಲಿರುವ ದಿವ್ಯಾಂಗರಿಗೆ ತ್ರಿಚಕ್ರ ವಾಹನ ನೀಡಿದರು, ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷರಾದ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಆಯುಕ್ತರಾದ ಮಂಜುನಾಥ್, ನಗರಸಭಾ ಸದಸ್ಯರಾದ ಮುದ್ದಪ್ಪ, ಶಿವಕುಮಾರ್, ರವಿಕುಮಾರ್, ಮಲ್ಲೇಶ, ಭಾಸ್ಕರ್, ರಮೇಶ್, ಕೆಂಪರಾಜು, ಮುನಿಯಪ್ಪ, ಪಿ.ಸಿ.ಲಕ್ಷ್ಮೀನಾರಾಯಣ್, ಚಂದ್ರಶೇಕರ್ ಸುಶೀಲಾ ರಾಘವ, ಮಂಜುಳ ಮತ್ತಿತರ ಸದಸ್ಯರು, ನಾಮಿನಿ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.

Edited By

Ramesh

Reported By

Ramesh

Comments