ನೂತನವಾಗಿ ನವೀಕರಣ ಗೊಂಡ ಡಾ||ರಾಜಕುಮಾರ್ ಕಲಾ ಮಂದಿರ ಉದ್ಘಾಟನೆ
ನಗರಸಭೆ ವತಿಯಿಂದ ನೂತನವಾಗಿ ನವೀಕರಣಗೊಂಡಿರುವ ಡಾ||ರಾಜಕುಮಾರ್ ಕಲಾಮಂದಿರವನ್ನು ಇಂದು ಉದ್ಘಾಟನೆ ಮಾಡಲಾಯಿತು, ಶಾಸಕ ಶ್ರೀ ಟಿ.ವೆಂಕಟರಮಣಯ್ಯನವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಹೊಸ ಕಲಾಮಂದಿರಕ್ಕೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷರಾದ ತ.ನ.ಪ್ರಭುದೇವ್ ರವರ ಕನಸಿನ ಕೂಸಾದ ಈ ಕಲಾ ಮಂದಿರವನ್ನು ನಗರಸಭೆ ವತಿಯ ಅನುದಾನದಿಂದ ನವೀಕರಿಸಲಾಗಿದೆ, ಜನರೇಟರ್ ಅಳವಡಿಸುವುದೂ ಸೇರಿದಂತೆ ಇನ್ನೂ ಸುಮಾರು ಇಪ್ಪತ್ತುಲಕ್ಷದ ಕಾಮಗಾರಿ ಬಾಕಿ ಇದೆ ಎಂದು ಪ್ರಭುದೇವ್ ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ತಿಳಿಸಿದರು, ಇದೇ ಸಂದರ್ಭದಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಶಾಸಕ ವೆಂಕಟರಮಣಯ್ಯನವರನ್ನು ನಗರಸಭೆ ವತಿಯಿಂದ ಸನ್ಮಾನಿಸಲಾಯಿತು. ಆಯುಕ್ತ ಮಂಜುನಾಥ್ ಎಲ್ಲ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷರಾದ ತ.ನ.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಆಯುಕ್ತರಾದ ಮಂಜುನಾಥ್, ನಗರಸಭಾ ಸದಸ್ಯರಾದ ಮುದ್ದಪ್ಪ, ರವಿಕುಮಾರ್, ಶಿವಕುಮಾರ್, ಮಲ್ಲೇಶ, ಕೆಂಪರಾಜು, ಮುನಿಯಪ್ಪ, ಪಿ.ಸಿ.ಲಕ್ಷ್ಮೀನಾರಾಯಣ್, ಭಾಸ್ಕರ್, ರಮೇಶ್, ಚಂದ್ರಶೇಕರ್ ಸುಶೀಲಾ ರಾಘವ, ಮಂಜುಳ ಮತ್ತಿತರ ಸದಸ್ಯರು, ನಾಮಿನಿ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.
Comments