ಬಿಗ್ ಬ್ರೇಕಿಂಗ್ : ಅಂತೂ-ಇಂತೂ ಫಿಕ್ಸ್ ಆಯ್ತು ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ..! ಯಾರಿಗೆ ಯಾವ ಜಿಲ್ಲೆ ?

ರಾಜ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿಗೆ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಇದೀಗ ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನಮ್ಮ ಕ್ಷೇತ್ರಗಳಲ್ಲಿ ಮಳೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಬಗೆ ಹರಿಸುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಅಗತ್ಯವಿದೆ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ, ಮಳೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಬಗೆ ಹರಿಸಬೇಕಾದ್ರೆ ಹಣ ಬಿಡುಗಡೆ ಮಾಡಬೇಕಾಗುತ್ತದೆ. ಹೀಗಾಗಿ ನಾನಾ ಕಾರಣಕ್ಕೆ ಆದಷ್ಟು ಬೇಗ ಜಿಲ್ಲಾ ಉಸ್ತುವಾರಿ ಸಚಿವನರನ್ನು ನೇಮಕ ಮಾಡಿ ಅಂತ ಕೂಡಲೇ ಉಸ್ತುವಾರಿ ಸಚಿವರ ನೇಮಕಾತಿ ಮಾಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಯಾರಿಗೆ ಯಾವ ಜಿಲ್ಲೆ? ಇಲ್ಲಿದೆ ನೊಡಿ ಸಂಭಾವನೀಯ ಪಟ್ಟಿ…
ಮೈಸೂರು- ಜಿ.ಟಿ.ದೇವೆಗೌಡ; ಮಂಡ್ಯ- ಸಿ.ಎಸ್.ಪುಟ್ಟರಾಜು; ಹಾಸನ -ಹೆಚ್.ಡಿ.ರೇವಣ್ಣ; ತುಮಕೂರು -ಶ್ರೀನಿವಾಸ್ ( ಗುಬ್ಬಿ); ಚಾಮರಾಜನಗರ –ಪುಟ್ಟರಂಗಶೆಟ್ಟಿ; ಕೋಲಾರ- ಕೃಷ್ಣ ಬೈರೆಗೌಡ; ಚಿಕ್ಕಬಳ್ಳಾಪುರ- ಎನ್ ಹೆಚ್ ಶಿವಶಂಕರರೆಡ್ಡಿ;ಕೊಡಗು- ಕೆ.ಜೆ.ಜಾರ್ಜ್; ದಕ್ಷಿಣಕನ್ನಡ- ಯು.ಟಿ.ಖಾದರ್; ಉಡುಪಿ- ಡಾ.ಜಯಮಾಲಾ; ಶಿವಮೊಗ್ಗ -ಡಿ.ಸಿ.ತಮ್ಮಣ್ಣ; ಚಿಕ್ಕಮಗಳೂರು- ಸಾ.ರಾ.ಮಹೇಶ್; ರಾಮನಗರ- ಡಿ.ಕೆ.ಶಿವಕುಮಾರ್; ಬಳ್ಳಾರಿ- ಡಿ.ಕೆ.ಶಿವಕುಮಾರ್; ದಾವಣಗೆರೆ- ಎನ್ ಮಹೇಶ್; ಬೆಂಗಳೂರು- ಗ್ರಾಮಾಂತರ ಜಮೀರ್ ಅಹ್ಮದ್ ಖಾನ್; ಬೆಂಗಳೂರು -ನಗರ ಡಾ.ಜಿ.ಪರಮೇಶ್ವರ; ಚಿತ್ರದುರ್ಗ- ವೆಂಕಟರಮಣಪ್ಪ; ಹಾವೇರಿ -ಆರ್ ಶಂಕರ್; ಧಾರವಾಡ- ರಮೇಶ್ ಜಾರಕಿಹೊಳಿ; ಬೆಳಗಾವಿ -ರಮೇಶ್ ಜಾರಕಿಹೊಳಿ; ಉತ್ತರಕನ್ನಡ -ಆರ್ ವಿ.ದೇಶಪಾಂಡೆ; ಗದಗ- ಕೃಷ್ಣ ಬೈರೆಗೌಡ; ಕೊಪ್ಪಳ -ಬಂಡೆಪ್ಪ ಖಾಶಂಪೂರ; ಕಲಬುರ್ಗಿ -ಪ್ರಿಯಾಂಕ ಖರ್ಗೆ; ಯಾದಗಿರಿ- ಪ್ರಿಯಾಂಕ ಖರ್ಗೆ; ರಾಯಚೂರು- ವೆಂಕಟರಾವ್ ನಾಡಗೌಡ; ಬಾಗಲಕೋಟ -ಎಂ.ಸಿ.ಮನಗೂಳಿ; ವಿಜಯಪುರ- ಶಿವಾನಂದ ಪಾಟೀಲ್; ಬೀದರ-ರಾಜಶೇಖರ್ ಪಾಟೀಲ್ ಹುಮ್ನಾಬಾದ್.
Comments