ಕುಮಾರಣ್ಣನ ಕಣ್ಣೀರಿಗೆ ಸ್ಪಂದಿಸಿದ ಹಾಸನದ ಈ ಪುಟ್ಟ ಪೋರಿ..!
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರಿಟ್ಟ ಬಗ್ಗೆ ರಾಜ್ಯಾದ್ಯಂತ ಭಾರಿ ಚರ್ಚೆಯಾಗು ತ್ತಿದೆ. ಇದೆ ಸಂದರ್ಭದಲ್ಲಿ ಪುಟ್ಟ ಬಾಲಕಿಯ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ . ಹೌದು. , ಹಾಸನ ಬಾಲಕಿಯೊಬ್ಬಳು ಕುಮಾರಣ್ಣ ಕಣ್ಣೀರು ಹಾಕಿದ್ದು ಕಂಡು ಧೈರ್ಯ ತುಂಬಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಲ್ಲೆ ಹೊಳೇನರಸೀಪುರ ತಾಲೂಕಿನ ಮಳಲಿ ಗ್ರಾಮದ ಬಾಲಕಿ ಅರುಂಧತಿ ಕುಮಾರಣ್ಣ ಕಣ್ಣೀರು ಹಾಕಿದನ್ನು ಕಂಡು ಧೈರ್ಯ ತುಂಬಿದ್ದಾಳೆ. ವಿಡಿಯೋದಲ್ಲಿ ಮಾತನಾಡಿದ ಬಾಲಕಿ ' ಕರ್ನಾಟಕ ಸಿಎಂ ಆಗಿ ನೀವು ಅಧಿಕಾರ ವಹಿಸಿಕೊಂಡ ಬಳಿಕ ಉತ್ತಮ ಮಳೆಯಾಗಿದ್ದು, ನಮ್ಮ ಗ್ರಾಮದಲ್ಲೂ ಉತ್ತಮ ಬೆಳೆಯಾಗಿದೆ. ನಿಮಗೆ ಅಧಿಕಾರ ಕೊಟ್ಟಿರುವುದು ಕನ್ನಡಿಗರು, ನಿಮ್ಮ ಪರ ಹೋರಾಟ ಮಾಡಲು ಕರ್ನಾಟಕ ರೈತ ಮಕ್ಕಳು ಜೊತೆಗಿರುತ್ತಾರೆ ಎಂದು ಬಾಲಕಿ ನುಡಿದಿದ್ದಾಳೆ. ರೈತ ಸಾಲಮನ್ನಾ ಕುರಿತು ಮಾತನಾಡಿದ ಬಾಲಕಿ 'ಕರ್ನಾಟಕದ ಬಹುತೇಕ ಡ್ಯಾಂಗಳು ಭರ್ತಿಯಾಗಿದ್ದು. ಉತ್ತಮ ಬೆಳೆ ಆಗುವ ನಿರೀಕ್ಷೆ ಇದೆ. ನಿಮ್ಮ ಸಾಲಮನ್ನಾ ನಮಗೆ ಬೇಡ. ಸಾಲಮನ್ನಾ ಬೇಡ ನಮ್ಮ ಕುಟುಂಬ ತುಂಬ ಚೆನ್ನಾಗಿದೆ.ನೀವು ಅತ್ತರೆ ಮಗೂ ಆಳುಬರುತ್ತೆ. ನೀವು ಹೆದರಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಈ ಪುಟ್ಟ ಬಾಲಕಿ ಅಭಯ ನೀಡಿದ ವಿಡಿಯೋ ವೈರಲ್ ಆಗಿದೆ.
Comments